ಸುರತ್ಕಲ್| ಎಂಆರ್‌ಪಿಎಲ್ ಮ್ಯಾನೇಜರ್ ಸೇರಿ 6 ಮಂದಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು
ಸುರತ್ಕಲ್: ಇಲ್ಲಿನ ಎಂಆರ್‌ಪಿಎಲ್ ನ ಶೇಖರಣಾ ಘಟಕದಲ್ಲಿ ಗ್ಯಾಸ್ ಸೋರಿಕೆಯಾಗಿ ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ ಎಂಆರ್‌ಪಿಎಲ್ ಮ್ಯಾನೇಜರ್ ಸೇರಿ 6 ಮಂದಿ ಅಧಿಕಾರಿಗಳ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿ ದುರ್ಘಟನೆಯಲ್ಲಿ ಮೃತಪಟ್ಟಿದ್ದ ಉತ್ತರ ಪ್ರದೇಶ ಪ್ರಯಾಗ್ ರಾಜ್ ನಿವಾಸಿ ದೀಪ್ ಚಂದ್ರ ಅವರ ಪತ್ನಿ ಅನಿತಾ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎ1 ಆರೋಪಿಯಾಗಿ ಎಂಆರ್‌ಪಿಎಲ್ ನ ಮ್ಯಾನೇಜರ್, ಒಎಂ ಆ್ಯಂಡ್ ಎಸ್‌ಸಿಜಿಎಂ (ಎ2), ಒಎಂ ಆ್ಯಂಡ್ ಎಸ್ ಸೆಕ್ಷನ್ ನ ಜಿಎಂ (ಎ3), ಒಎಂ ಆ್ಯಂಡ್ ಎಸ್ ಸೆಕ್ಷನ್ ನ ಸಿಎಂ (ಎ4), ಒಎಂ ಆ್ಯಂಡ್ ಎಸ್ ನ ಎಸ್ ಐಸಿ (ಎ5) ಹಾಗೂ ಒಎಂಎಸ್ ಸೆಕ್ಷನ್ ನ ಪಿಎಸ್ (ಎ6) ಆರೋಪಿಗಳೆಂದು ಅನಿತಾ ಅವರ ದೂರು ಆಧರಿಸಿ ಸುರತ್ಕಲ್ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಸದ್ಯ ಆರೋಪಿಗಳ ಬಂಧನ ಪ್ರಕ್ರಿಯೆ ಆರಂಭಿಸಿರುವ ತನಿಖಾಧಿಕಾರಿಯಾಗಿರುವ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷರಾದ ಪ್ರಮೋದ್ ಕುಮಾರ್ ಅವರ ತಂಡ, ಎಲ್ಲಾ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.