×
Ad

ಸುರತ್ಕಲ್:‌ ಯುವತಿ ನಾಪತ್ತೆ

Update: 2024-09-19 23:10 IST

ಸುರತ್ಕಲ್:‌ ಸ್ನೇಹಿತೆಯೊಂದಿಗೆ ಮಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳಪೇಟೆಯಲ್ಲಿ ವಾಸವಿದ್ದ ಹನುಮಂತ ಹಾಗೂ ಲಕ್ಷ್ಮವ್ವ ಎಂಬವರ ಮಗಳು ಕುಮಾರಿ ಸುನೀತಾ (19) ಕಾಣೆಯಾದ ಯುವತಿ ಎಂದು ತಿಳಿದು ಬಂದಿದೆ.

ಈಕೆಯ ತಂದೆ ತಾಯಿ ದಾವಣಗೆರೆಯ ದೇವಸ್ಥಾನಕ್ಕೆಂದು ತೆರಳಿದ್ದರು. ಮನೆಯಲ್ಲಿ ಅಜ್ಜಿ ಇದ್ದು, ಸ್ನೇಹಿತೆ ಕೌಶಲ್ಯಳೊಂದಿಗೆ ಮಂಗಳೂರಿಗೆ ಹೋಗಿ ಬರುವುದಾಗಿ ಅವರಲ್ಲಿ ಹೇಳಿ ಹೋದವಳು ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.

ಕಾಣೆಯಾಗಿರುವ ಸುನೀತಾ ಸಾಧಾರಣ ಶರೀರ ಹೊಂದಿದ್ದು, 4.5 ಅಡಿ ಎತ್ತರ ಇದ್ದಾರೆ. ಎಣ್ಣೆ ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ತುಳು ಭಾಷೆ ಬಲ್ಲವರಾಗಿದ್ದಾರೆ. ಇವರು ಪತ್ತೆಯಾದಲ್ಲಿ ಸುರತ್ಕಲ್‌ ಪೊಲೀಸ್‌ ಠಾಣೆ ಅಥವಾ ಕಂಟ್ರೋಲ್‌ ರೂಮ್‌ ಗೆ ಮಾಹಿತಿ ನೀಡುವಂತೆ ಸುರತ್ಕಲ್‌ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News