×
Ad

ಸುರತ್ಕಲ್ : ನದಿಗೆ ಬಿದ್ದು ಯುವಕ ಮೃತ್ಯು

Update: 2023-11-20 20:31 IST

ಸುರತ್ಕಲ್, ನ.20: ಮರವೂರು ರೈಲ್ವೇ ಸೇತುವೆಯ ಕೆಳಗಿನ ನದಿಯಲ್ಲಿ ಈಜಲು ತೆರಳಿದ್ದ ವೇಳೆ ಆಯತಪ್ಪಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ವರದಿಯಾಗಿದೆ.

ಮೃತರನ್ನು ಮೂಲತಃ ಬಜ್ಪೆ ನಿವಾಸಿ ಸದ್ಯ ಸುರತ್ಕಲ್‌ ಸಮೀಪದ ಚೊಕ್ಕಬೊಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಾಕಿರ್‌ (30) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಾಕಿರ್‌ ತನ್ನ 4 ಮಂದಿ ಸ್ನೇಹಿತರೊಂದಿಗೆ ಮರವೂರು ರೈಲ್ವೇ ಸೇತುವೆಯ ಕೆಳ ಭಾಗಕ್ಕೆ ಈಜಲೆಂದು ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಶಾಕಿರ್‌ ಕಾಲು ಜಾರಿ ಆಯತಪ್ಪಿ ನದಿಗೆ ಬಿದ್ದು ನೀರಿನಲ್ಲಿ ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.

ಬಳಿಕ ಜೊತೆಗಿದ್ದ ಸ್ನೇಹಿತರು ಪೊಲೀಸರು ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಕಾವೂರು ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಬಂದು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News