×
Ad

ಸುರಿಬೈಲ್ ಅಬ್ರಾಡ್ ಫ್ರೆಂಡ್ಸ್‌ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ

Update: 2025-10-07 22:12 IST

ಕಲ್ಲಡ್ಕ: ಕಲ್ಲಡ್ಕ ಸಮೀಪದ ಸುರಿಬೈಲ್ ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿರುವ ಸುರಿಬೈಲ್ ಅಬ್ರಾಡ್ ಫ್ರೆಂಡ್ಸ್‌ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಜಮಾಅತ್ ಸಮಿತಿಗೆ ಆಂಬ್ಯುಲೆನ್ಸ್ ಹಸ್ತಾಂತರಿಸಲಾಯಿತು.

ಸುರಿಬೈಲ್ ಜಮಾಅತ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಹಾಜಿ ದೊಡ್ಡಮನೆ ಇವರ ಅಧ್ಯಕ್ಷತೆಯಲ್ಲಿ ನಡೆದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸುರಿಬೈಲ್ ಅಬ್ರಾಡ್ ಫ್ರೆಂಡ್ಸ್‌ ಚಾರಿಟೇಬಲ್ ಟ್ರಸ್ಟ್(ರಿ) ಕಾರ್ಯದರ್ಶಿ ಶೆರೀಫ್ ಎಸ್.ಎಚ್ ಅವರು ಆಂಬ್ಯುಲೆನ್ಸ್ ಕೀ ಜಮಾಅತ್ ಸಮಿತಿಗೆ ಹಸ್ತಾಂತರಿಸಿದರು. ಸುರಿಬೈಲ್ ಮಸೀದಿ ಖತೀಬ್ ಉಸ್ತಾದ್ ಮುಹಮ್ಮದ್ ಸಖಾಫಿ ಆಂಬ್ಯುಲೆನ್ಸ್ ಗೆ ಚಾಲನೆ ನೀಡಿ ದುವಾಃ ನೆರವೇರಿಸಿದರು.

ಜಮಾಅತ್ ಸಮಿತಿ ಕಾರ್ಯದರ್ಶಿ ರಫೀಕ್ ಹಾಜಿ ಕೋಡಿಬೈಲ್, ಉಪಾಧ್ಯಕ್ಷರಾದ ಬಿಎಸ್ ಸುಲೈಮಾನ್, ಯೂಸುಫ್ ಕೆದಿಲ, ಕೋಶಾಧಿಕಾರಿ ಶೆರೀಫ್ ಹಾಜಿ ಎಸ್ ಎಸ್, ಅಬ್ದುಲ್ ಅಝೀಝ್ ಎಸ್ ಎಸ್, ಟ್ರಸ್ಟ್ ಲೆಕ್ಕ ಪರಿಶೋಧಕ ಕರೀಂ ಮಿಲನ್, ಆಂಬ್ಯುಲೆನ್ಸ್ ಚಾಲಕರಾದ ಅಶ್ರಫ್ ಶೆಡ್ಡ್, ಬಿಎಸ್ ಮುಹಮ್ಮದ್, ಜಬ್ಬಾರ್, ಇಕ್ಬಾಲ್ ಸಿಎಂ, ಆಡಳಿತ ಕಮಿಟಿಯ ಸದಸ್ಯರು, ಜಮಾಹತರು ಉಪಸ್ಥಿತರಿದ್ದು ಸುರಿಬೈಲ್ ಅಬ್ರಾಡ್ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ)ಇದರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಜೊ.ಕಾರ್ಯದರ್ಶಿ ಹಾಜಿ ಎ.ಕೆ.ಹಾರಿಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.








Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News