ಮಂಗಳೂರಿನಿಂದ ಹಜ್ ಯಾತ್ರೆ ಪುನರಾರಂಭಿಸಲು ಎಸ್‌ವೈಎಸ್ ಆಗ್ರಹ
ಮಂಗಳೂರು: ಭಾರತೀಯ ಹಜ್ ಕಮಿಟಿಯ ಮೂಲಕ ಪವಿತ್ರ ಹಜ್ ಯಾತ್ರೆಗೆ ತೆರಳುವ ಕರಾವಳಿ ಜಿಲ್ಲೆಗಳ ಯಾತ್ರಿಕರಿಗಾಗಿ ಮಂಗಳೂರು ವಿಮಾನ ನಿಲ್ದಾಣದಿಂದಲೇ ಹಜ್ ಯಾತ್ರೆಯನ್ನು ಪುನರಾರಂಭಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘವು ಹಜ್ ಸಚಿವ ರಹೀಂ ಖಾನ್ ಅವರನ್ನು ಆಗ್ರಹಿಸಿದೆ.
ಈ ಹಿಂದೆ ಹಜ್ ಎಂಬಾರ್ಕೇಶನ್ ಸೆಂಟರ್ ಆಗಿದ್ದ ಮಂಗಳೂರನ್ನು ಕೊರೋನ ಸಾಂಕ್ರಾಮಿಕದ ವೇಳೆ ಕೈ ಬಿಡಲಾ ಗಿತ್ತು. 2022ರಲ್ಲಿ ಭಾರತದಿಂದ ಹಜ್ ಯಾತ್ರೆ ಪುನರಾರಂಭವಾಗಿದ್ದರೂ ಮಂಗಳೂರು ಹಜ್ ಎಂಬಾರ್ಕೇಶನ್ ಸೆಂಟರನ್ನು ಪುನಃ ಸ್ಥಾಪಿಸಿಲ್ಲ. ದ.ಕ., ಉಡುಪಿ ಸೇರಿದಂತೆ ಕರಾವಳಿ ಮತ್ತು ಆಸುಪಾಸಿನ ಅಧಿಕ ಸಂಖ್ಯೆಯ ಯಾತ್ರಿಕರು ಬೆಂಗಳೂರನ್ನೇ ಆಶ್ರಯಿಸಬೇಕಾಗಿ ಬಂದಿದೆ. ಮಂಗಳೂರಿನಲ್ಲಿ ಹಜ್ ಭವನವನ್ನು ಕೂಡ ಸ್ಥಾಪಿಸಲಾ ಗುತ್ತಿದ್ದು, ಇಲ್ಲಿಂದಲೇ ಯಾತ್ರೆ ಹೊರಡುವ ಅವಕಾಶ ಸಿಕ್ಕಿದರೆ ಯಾತ್ರಿಕರಿಗೆ, ವಿಶೇಷವಾಗಿ ವೃದ್ಧರು, ಮಹಿಳೆಯ ರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಕ್ ರಾಜ್ಯ ಹಜ್ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನ ಶಾಫಿ ಸಅದಿ, ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್ ಉಪಸ್ಥಿತರಿದ್ದರು.