×
Ad

ಎಸ್‌ವೈಎಸ್ ದ.ಕ. ಜಿಲ್ಲಾ ವೆಸ್ಟ್: ರಬೀವುಲ್ ಹಬೀಬ್ ಮೀಲಾದ್ ಕ್ಯಾಂಪೇನ್‌ಗೆ ಚಾಲನೆ

Update: 2023-09-20 22:03 IST

ಮಂಗಳೂರು, ಸೆ.20: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ರಾಜ್ಯ ಸಮಿತಿಯ ನಿರ್ದೇಶನದಂತೆ ರಾಜ್ಯಾದ್ಯಂತ ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 15 ತನಕ ನಡೆಸಲಾಗುವ ರಬೀವುಲ್ ಹಬೀಬ್ ಮೀಲಾದ್ ಕ್ಯಾಂಪೇನ್ ನ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಮಟ್ಟದ ಉದ್ಘಾಟನೆಯು ತಾಜುಲ್ ಫುಖಹಾ ಬೇಕಲ್ ಉಸ್ತಾದರ ಮಖ್ಬರ ಪರಿಸರದಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷ ಇಸ್ಹಾಖ್ ಝುಹ್ರಿ ದೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಹಾಫಿಳ್ ಯಾಕೂಬ್ ಸಅದಿ ನಾವೂರು ಕ್ಯಾಂಪೇನ್ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಖಲೀಲ್ ಮಾಲಿಕಿ ಬೋಳಂತೂರು, ರಾಜ್ಯ ನಾಯಕರಾದ ಬಶೀರ್ ಮದನಿ ಕೂಳೂರು, ಆಸಿಫ್ ಹಾಜಿ ಕೃಷ್ಣಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುರಹ್ಮಾನ್ ಪ್ರಿಂಟೆಕ್ ಕೃಷ್ಣಾಪುರ, ಕೋಶಾಧಿಕಾರಿ ನಝೀರ್ ಮುಡಿಪು,ಮರಿಕ್ಕಳ ಮುದರ್ರಿಸ್ ಅಬ್ಬಾಸ್ ಸಖಾಫಿ ಕೊಡಗು, ಜಿಲ್ಲಾ ಕಾರ್ಯದರ್ಶಿಗಳಾದ ಬದ್ರುದ್ದೀನ್ ಅಝ್ಹರಿ ಕೈಕಂಬ, ಮಹ್ಬೂಬುರ‌್ರಹ್ಮಾನ್ ಸಖಾಫಿ ಕಿನ್ಯ, ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ, ತೌಸೀಫ್ ಸಅದಿ ಹರೇಕಳ,ಉಮರುಲ್ ಫಾರೂಖ್ ಶೇಡಿಗುರಿ, ಅಬ್ದುರ‌್ರಝಾಖ್ ಭಾರತ್ ಮಂಚಿ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News