×
Ad

ಎಸ್‌ವೈಎಸ್ ದ.ಕ.ಜಿಲ್ಲಾ ವೆಸ್ಟ್ 'ಯುನಿಟ್ ಹೋಮೋನ್'ಗೆ ಚಾಲನೆ

Update: 2023-10-19 23:16 IST

ಮಂಗಳೂರು : ಎಸ್‌ವೈಎಸ್ ನ 30 ನೇ ವರ್ಷಾಚರಣೆಯ ಭಾಗವಾಗಿ ಜಿಲ್ಲಾ ಯುವಜನೋತ್ಸವ ನವೆಂಬರ್ 14 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಯುವ ಜನೋತ್ಸವದ ಪ್ರಚಾರಾರ್ಥ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಮಿತಿ ವ್ಯಾಪ್ತಿಯ 33 ಸರ್ಕಲ್‌ಗಳಲ್ಲಿ ನಡೆಸಲಾಗುವ 'ಯೂನಿಟ್ ಹೋಮೋನ್' ಇದರ ಚಾಲನಾ ಕಾರ್ಯಕ್ರಮವು ಬಂಟ್ವಾಳ ಝೋನ್ ವ್ಯಾಪ್ತಿಯ ಸಜಿಪದ ಕೊಳಕೆಯಲ್ಲಿ ನಡೆಯಿತು.

ಸಯ್ಯಿದ್ ಮುಶ್ತಾಕುರ್ರಹ್ಮಾನ್ ಸ‌ಅದಿ ತಂಙಳ್ ದುಆಗೈದರು. ಬಂಟ್ವಾಳ ಝೋನ್ ಅಧ್ಯಕ್ಷ ಮಹ್ಮೂದ್ ಸ‌ಅದಿ ಸಭೆಯನ್ನು ಉದ್ಘಾಟಿಸಿದರು.

ಎಸ್‌ವೈಎಸ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾಧ್ಯಕ್ಷ ವಿ.ಯು ಇಸ್ಹಾಕ್ ಝುಹ್ರಿ, ಜಿಲ್ಲಾ ನಾಯಕ ಇಸ್ಮಾಈಲ್ ಮಾಸ್ಟರ್ ಮೊಂಟೆಪದವು ತರಗತಿ ಮಂಡಿಸಿದರು. ಈ ಸಂದರ್ಭ ಅಬ್ದುಲ್ಲಾ ಕೊಳಕೆ, ಇಕ್ಬಾಲ್ ಗೋಳಿಪಡ್ಪು, ಎಸ್.ಕೆ.ಮುಹಮ್ಮದ್ ಕೊಳಕೆ ಮುಂತಾದವರು ಉಪಸ್ಥಿತರಿದ್ದರು.

ಸಜಿಪ ಸರ್ಕಲ್ ಕಾರ್ಯದರ್ಶಿ ಅಕ್ಬರಲಿ ಮದನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News