ಎಸ್ ವೈ ಎಸ್ ವತಿಯಿಂದ ಇಸಾಬ, ಸಾಂತ್ವನ ನಾಯಕರಿಗೆ ʼಇಸ್ಲಾʼ ಕ್ಯಾಂಪ್
ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ದ. ಕ ಜಿಲ್ಲಾ ವೆಸ್ಟ್ ಅಧೀನದ ಝೋನ್, ಸರ್ಕಲ್ ಇಸಾಬ &ಸಾಂತ್ವನ ಉಪಾಧ್ಯಕ್ಷರು ಕಾರ್ಯದರ್ಶಿಗಳಿಗಾಗಿ ನಡೆಸಲಾದ' ಇಸ್ಲಾ' ಕ್ಯಾಂಪ್ ಮಂಗಳೂರಿನ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.
ಎಸ್ ವೈ ಎಸ್ ದ. ಕ ಜಿಲ್ಲಾ ಅಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ ಅಧ್ಯಕ್ಷತೆ ವಹಿಸಿದರು. ಎಸ್ ವೈ ಎಸ್ ರಾಜ್ಯ ಇಸಾಬ &ಸಾಂತ್ವನ ಮುಖ್ಯಸ್ಥ ಖಲೀಲ್ ಮಾಲಿಕೀ ಬೋಳಂತೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಪ್ರಸ್ತಾವನೆಗೈದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಉಮರ್ ಸಖಾಫಿ ಎಡಪ್ಪಾಲಂ ತರಗತಿ ನಡೆಸಿಕೊಟ್ಟರು.
ಸಾಂತ್ವನ & ಇಸಾಬ ಜಿಲ್ಲಾ ಮುಖ್ಯಸ್ಥ ಹಾಫಿಳ್ ಯಾಕೂಬ್ ಸಅದಿ ನಾವೂರು ಯೋಜನೆಗಳನ್ನು ಮಂಡಿಸಿದರು.
ಜಿಲ್ಲಾ ನಾಯಕರಾದ ನಝೀರ್ ಹಾಜಿ ಲುಲು, ಹಸನ್ ಪಾಂಡೇಶ್ವರ, ಹಕೀಂ ಪೂಮಣ್ಣು, ಜಬ್ಬಾರ್ ಕಣ್ಣೂರು, ಇಸ್ಹಾಕ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.
ಇಸಾಬ &ಸಾಂತ್ವನ ಕಾರ್ಯದರ್ಶಿ ಸಿ ಎಂ ಫಾರೂಕ್ ಶೇಡಿಗುರಿ ಸ್ವಾಗತಿಸಿ ವಂದಿಸಿದರು.