ಸೆ.23ರಿಂದ ತಾಜುಲ್ ಉಲಮಾ ಉರೂಸ್: ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳೂರು: ಆರುವರೆ ದಶಕಗಳ ಕಾಲ ಉಳ್ಳಾಲವನ್ನು ಕೇಂದ್ರೀಕರಿಸಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ನಾಯಕತ್ವ ನೀಡಿದ್ದ ಅಧ್ಯಾತ್ಮ ಗುರು ತಾಜುಲ್ ಉಲಮಾ ಸೈಯದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ಅವರ ಹನ್ನೆರಡನೇ ಉರೂಸ್ ಕಾರ್ಯಕ್ರಮವು ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂ ದರ್ಗಾ ಶರೀಫ್‌ನಲ್ಲಿ ನಡೆಯಲಿದೆ.
ಸೆ. 23ರಂದು ಸಂಜೆ 4 ಗಂಟೆಗೆ ಕೇರಳ ರಾಜ್ಯ ಹಜ್ ಕಮಿಟಿ ಅಧ್ಯಕ್ಷ ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಉದ್ಘಾಟಿಸಲಿದ್ದಾರೆ . ಸೆ.25ರ ಸಂಜೆ ಸಮಾರೋಪಗೊಳ್ಳಲಿದ್ದು , ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಮುಖ್ಯ ಭಾಷಣ ಮಾಡಲಿರುವರು. ಮೂರು ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಹಲವು ಉನ್ನತ ಉಲಮಾ ಸಾದಾತುಗಳು, ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ. ಸೆ 23ರಿಂದ 25ರ ತನಕ ನಡೆಯುವ ತಾಜುಲ್ ಉಲಮಾ ಉರೂಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಖ್ ಕರೆ ನೀಡಿದ್ದಾರೆ.