ಔಷಧದ ಬದಲು ವಿಷ ಸೇವಿಸಿ ವೃದ್ಧ ಮೃತ್ಯು
Update: 2024-09-10 21:29 IST
ಅಮಾಸೆಬೈಲು, ಸೆ.10: ಮಂಡಿನೋವಿನ ಸಿರಪ್ ಸೇವಿಸುವ ಬದಲು ಅಕಸ್ಮಿಕವಾಗಿ ಕೈ ತಪ್ಪಿನಿಂದ ಅಡಿಕೆ ಗಿಡಕ್ಕೆ ಹಾಕುವ ವಿಷದ ಔಷಧಿ ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಡಾಮಕ್ಕಿ ಎಂಬಲ್ಲಿ ನಡೆದಿದೆ.
ಮೃತರನ್ನು ಮಡಾಮಕ್ಕಿ ಗ್ರಾಮದ ಶಿವರಾಮ(74) ಎಂದು ಗುರುತಿಸ ಲಾಗಿದೆ. ಇವರು ದೃಷ್ಠಿದೋಷದಿಂದ ಆ.24ರಂದು ಮಂಡಿನೋವಿನ ಔಷಧಿ ಬದಲು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಸೆ.8ರಂದು ರಾತ್ರಿ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಇವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.