ದೇಶದ ಪ್ರಜೆಗೆ ಸಂವಿಧಾನವೇ ಗ್ರಂಥ: ವಿನಯಕುಮಾರ್ ಸೊರಕೆ
ಕನ್ನಂಗಾರ್‌ನಲ್ಲಿ ಧಾರ್ಮಿಕ ಕಾರ್ಯಕ್ರಮ
ಪಡುಬಿದ್ರಿ: ಜಾತಿ, ಧರ್ಮ, ವರ್ಗಗಳ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸಿ ಗೌರವಿಸುವುದೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತವಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೆ ಸಂವಿಧಾನವೇ ಜೀವನದ ದಿಕ್ಕು ತೋರಿಸುವ ಪರಮ ಗ್ರಂಥ. ಅದರಂತೆ ನಾವು ನಡೆಯಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಅವರು ರವಿವಾರ ಕಣ್ಣಂಗಾರ್ ಎನ್‍ಎಸ್ ರೋಡ್ ಬೇಂಗಳೆಯ ನೂರುಲ್ ಹುದಾ ಮಸ್ಜಿದ್‍ನಲ್ಲಿ ನಅತೇ ಶರೀಫ್, ಮತಪ್ರಭಾಷಣ ಹಾಗೂ ವಾರ್ಷಿಕ ಜಲಾಲಿಯ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೂರುಲ್ ಹುದಾ ಮಸ್ಜಿದ್‍ನ ಅಧ್ಯಕ್ಷ ಅಬ್ದುಲ್ ಹಮೀದ್ ಮಿಲಾಫ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ ಶುಭಹಾರೈಸಿದರು. ಮುಹಮ್ಮದ್ ಮುಸ್ಲಿಯಾರ್ ಪೂಂಜಾಲಕಟ್ಟೆ ಉಸ್ತಾದ್ ದುವಾ ನೆರವೇರಿಸಿದರು. ನೂರುಲ್ ಹುದಾ ಮಸ್ಜಿದ್‍ನ ಅಧ್ಯಕ್ಷ ಅಬ್ದುಲ್ ಹಮೀದ್ ಮಿಲಾಫ್ ಅಧ್ಯಕ್ಷತೆ ವಹಿಸಿದ್ದರು. ಕನ್ನಂಗಾರ್ ಜುಮಾ ಮಸೀದಿ ಖತೀಬ್ ಮುಹಮ್ಮದ್ ಅಶ್ರಫ್ ಸಖಾಫಿ ಕಿನ್ಯಾ ಉದ್ಘಾಟಿಸಿದರು. ಖ್ಯಾತ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಕೇರಳ ಇವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಭಾಷಣಗೈದರು.
ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ, ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಹಾಗೂ ನೂರುಲ್ ಹುದಾ ಮಸ್ಜಿದ್‍ನ ಅಧ್ಯಕ್ಷ ಅಬ್ದುಲ್ ಹಮೀದ್ ಮಿಲಾಫ್ ಇವರನ್ನು ಸನ್ಮಾನಿಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ನ್ಯಾಷನಲ್ ಗ್ರೂಪ್‍ನ ಅಬ್ದುಲ್ ಕಲಾಂ ಆಝಾದ್, ಮಲ್ಲಾರು-ಮಜೂರು ಮಸೀದಿ ಅಬಿವೃದ್ಧಿ ಸಮಿತಿಯ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಕಣ್ಣಂಗಾರ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ಶೇಖ್ ಅಬ್ದುಲ್ ಹಮೀದ್ ಮಿನಾ, ಕಣ್ಣಂಗಾರ್ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಹಾಜಿ ಮೊಯ್ದು ಬಿಲೀಫ್ ಕಣ್ಣಂಗಾರ್ ಕಣ್ಣಂಗಾರ್ ಸದರ್ ಮುಅಲ್ಲಿಂ ಮಹಮೂದ್ ಸಅದಿ, ಶಾ ಕನ್ಸ್‍ಟ್ರಕ್ಸನ್‍ನ ಶರೀಫ್, ಅಕ್ರಮ್ ಹಾಜಿ ಮೂಡಿಗೆರೆ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್, ಮೊಯ್ದೀನ್ ಪಂಬತೋಟ, ರಶೀದ್ ಹಾಜಿ ಮೂಡಿಗೆರೆ, ಅಬ್ದುಲ್ಲಾ ಹಾಜಿ ಮೂಡಿಗೆರೆ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್, ಕೋಶಾಧಿಕಾರಿ ಇಲ್ಯಾಸ್, ಜತೆಕಾರ್ಯದರ್ಶಿ ಸಾಧಿಕ್, ಶರೀಫ್, ಬದ್ರುದ್ದೀನ್, ಫಝಲ್ ಕನ್ನಂಗಾರ್ ಉಪಸ್ಥಿತರಿದ್ದರು.
ಸಯ್ಯದ್ ಮುಖ್ತಾರ್ ತಂಙಳ್ ನೇತೃತ್ವದಲ್ಲಿ ಜಲಾಲಿಯ್ಯ ದ್ಸಿಕ್ರ್ ನಡೆಯಿತು. ಸದಸ್ಯರಾದ ಬದ್ರುದ್ದೀನ್, ಶರೀಫ್, ಖಾಸಿಂ ಉಪಸ್ಥಿತರಿದ್ದರು. ನೌಫಾಲ್ ವಿಟ್ಲ ಕಾರ್ಯಕ್ರಮ ನಿರ್ವಹಿಸದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಮುಹಮ್ಮದ್ ಆಝಮ್ ರಝಾ ಇವರಿಂದ ಇಶ್ಕೆ ಮದೀನಾ ನಅತೇ ಶರೀಫ್ ನಡೆಯಿತು.