×
Ad

ಮಂಗಳೂರು: ಮೀಫ್ ವತಿಯಿಂದ ಎಸೆಸ್ಸೆಲ್ಸಿ ವಿಷಯವಾರು ಶಿಕ್ಷಕರ ಕಾರ್ಯಾಗಾರ

Update: 2025-11-07 19:17 IST

ಮಂಗಳೂರು:ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ (ಮೀಫ್) ವತಿಯಿಂದ ಎಸೆಸ್ಸೆಲ್ಸಿ ವಿಷಯವಾರು ಶಿಕ್ಷಕರಿಗೆ ನಗರದ ಜೆಪ್ಪಿನಮೊಗರು ಓಷ್ಯನ್ ಗ್ಲೋಬಲ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿರುವ ದ.ಕ.ಜಿಲ್ಲಾ ಮಟ್ಟದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ಒಷ್ಯನ್ ಕನ್‌ಸ್ಟ್ರಕ್ಟನ್ ಮಂಗಳೂರು ಇದರ ಆಡಳಿತ ನಿರ್ದೇಶಕ ಇನಾಯತ್ ಅಲಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ವಿಷಯ ನಿರೀಕ್ಷಕ ಲಕ್ಷ್ಮಿ ನಾರಾಯಣ ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮೀಫ್ ಕೇಂದ್ರ ಸಮಿತಿ ಅಧ್ಯಕ್ಷ ಮೂಸಬ್ಬ ಬ್ಯಾರಿ ಮಾತನಾಡಿ ದ.ಕ.ಮತ್ತು ಉಡುಪಿ ಜಿಲ್ಲೆಗಳ ೪೮ ವಿದ್ಯಾಸಂಸ್ಥೆಗಳ ೨೦೦ಕ್ಕೂ ಅಧಿಕ ಎಸೆಸ್ಸೆಲ್ಸಿ ವಿಷಯವಾರು ಶಿಕ್ಷಕಿಯರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದಾರೆ. ಶಿಕ್ಷಣ ಇಲಾಖೆಯ ೧೧ ಮಂದಿ ಸಂಪನ್ಮೂಲ ತಜ್ಞರನ್ನು ದ.ಕ. ಡಿಡಿಪಿಐ ಕಾರ್ಯಗಾರಕ್ಕೆ ನಿಯೋಜಿಸಿದ್ದಾರೆ ಎಂದರು.

ಒಷ್ಯನ್ ಗ್ಲೋಬಲ್ ಸಂಸ್ಥೆಯ ಆಡಳಿತ ನಿರ್ದೇಶಕ ಮುಹಮ್ಮದ್ ಸಿನಾನ್ ಸಖಾಫಿ, ಸಂಚಾಲಕ ಸಯೀದುದ್ದೀನ್, ಆಡಳಿತ ಮಂಡಳಿ ಸದಸ್ಯರಾದ ಅನ್ಸಾರ್ ಸಖಾಫಿ, ಶಬ್ಬೀರ್ ಕೃಷ್ಣಾಪುರ, ನೌಶಾದ್ ಸಖಾಫಿ, ಹನೀಫ್ ಜಪ್ಪು, ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್, ಕಾರ್ಯದರ್ಶಿಗಳಾದ ಅನ್ವರ್ ಹುಸೇನ್ ಗೂಡಿನಬಳಿ, ಶೈಖ್ ರಹ್ಮತುಲ್ಲ ಬುರೂಜ್, ಅಡ್ವಕೇಟ್ ಮುಹಮ್ಮದ್ ಫಾರೂಕ್, ಮುಹಮ್ಮದ್ ಶರೀಫ್ ಬಜ್ಪೆ, ಅಝೀಝ ಅಂಬರ್‌ವ್ಯಾಲಿ ಉಪಸ್ಥಿತರಿದ್ದರು.

ಗ್ಲೋಬಲ್ ವಿದ್ಯಾರ್ಥಿನಿಯರು ಕಿರಾಅತ್ ಪಠಿಸಿದರು. ಶಿಕ್ಷಕಿಯರು ಪ್ರಾರ್ಥನಾ ಗೀತೆ ಹಾಡಿದರು. ಓಷ್ಯನ್ ಗ್ಲೋಬಲ್ ಸಂಸ್ಥೆಯ ಪ್ರಾಂಶುಪಾಲೆ ಜಾನ್ವಿ ಸನಲ್ ಸ್ವಾಗತಿಸಿದರು. ಮೀಫ್ ಉಪಾಧ್ಯಕ್ಷ ಪರ್ವೇಜ್ ಅಲಿ ವಂದಿಸಿದರು. ಕಾರ್ಯದರ್ಶಿ ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News