ಸಂತಾ ಟೋಪಿ ವ್ಯಾಪಾರಿಗಳೊಂದಿಗೆ ಪುಂಡಾಟಿಕೆ ಖಂಡನೀಯ; ಇದು ಸಂಘಪರಿವಾರದ ಜನಾಂಗೀಯ ದ್ವೇಷದ ಪ್ರತಿರೂಪ: ವಿಮೆನ್ ಇಂಡಿಯಾ ಮೂವ್ಮೆಂಟ್
ದೇಶಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ದ್ವೇಷ, ಹಿಂಸೆಯ ಪ್ರಕರಣಗಳ ಪೈಕಿ ಇತ್ತೀಚಿಗೆ ಬೆಂಗಳೂರಿನಲ್ಲಿ ಅಂಧ ಭಕ್ತಿಯ ಪರಾಕಾಷ್ಠೆಗೆ ತಲುಪಿದ ಕೆಲ ಹಿಂದುತ್ವ ಭಯೋತ್ಪಾದಕರು ದೈನಂದಿನ ದುಡಿಮೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಬಡ ವ್ಯಾಪಾರಿಗಳೊಂದಿಗೆ ಧರ್ಮ ದ್ವೇಷದ ಅಮಲೇರಿಸಿಕೊಂಡು ಪುಂಡಾಟಿಕೆ ಮೆರೆದಿರುವ ಕ್ರತ್ಯ ತೀರಾ ಅಮಾನುಷವಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಹೇಳಿದರು.
ಜೀವನೋಪಾಯಕ್ಕಾಗಿ ಸಂತಾ ಟೋಪಿ ಮಾರುತ್ತಿದ್ದ ವ್ಯಾಪಾರಿಗಳನ್ನು ಬೆದರಿಸಿ , ವ್ಯಾಪಾರಕ್ಕೆ ನಿರ್ಬಂಧಿಸುವುದು ಭಯೋತ್ಪಾದನಾ ಕೃತ್ಯವಾಗಿದೆ. ಬಿಜೆಪಿ, ಸಂಘಪರಿವಾರದ ಧರ್ಮಾಂಧತೆಯ, ಹಿಂಸಾ ರೂಪಕ ರಾಜಕೀಯ ಯಾವ ರೀತಿ ಸಮಾಜದಲ್ಲಿ ಅರಾಜಕತೆಯನ್ನು ಸ್ರಷ್ಟಿ ಮಾಡುತ್ತಿದೆ ಎಂಬುದಕ್ಕೆ ಪ್ರಸ್ತುತ ಘಟನೆ ಸ್ಪಷ್ಟ ನಿದರ್ಶನವಾಗಿದೆ.
ಇಂತಹ ಸಮಾಜ ಘಾತುಕ ಶಕ್ತಿಗಳು ದೇಶದ ಸೌಹಾರ್ದತೆಗೆ ಮಾರಕವಾಗಿದ್ದು ಮಾತ್ರವಲ್ಲದೆ ದೇಶದ ಕಾನೂನು ಸುವ್ಯವಸ್ಥೆಯ ಮೇಲೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಇಂತಹ ಪ್ರಕರಣಗಳಿಂದಾಗಿ ದೇಶದ ಹಿರಿಮೆ, ಘನತೆಗೆ ಭಂಗ ಉಂಟಾಗುತ್ತಿದೆ. ಇಂತಹ ಅಲ್ಪಸಂಖ್ಯಾತ ವಿರೋಧಿ ಜನಾಂಗೀಯ ದ್ವೇಷ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ವಹಿಸಿ ದೇಶದ ಪ್ರತಿಯೊಬ್ಬ ಪ್ರಜೆಯ ಭದ್ರತೆ, ಸುರಕ್ಷತೆಯನ್ನು ಖಾತರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.