×
Ad

ಮಹಿಳೆ ನಾಪತ್ತೆ

Update: 2023-09-12 18:05 IST

ಮೂಡುಬಿದಿರೆ: ಸಮೀಪದ ಮಹಿಳೆಯೋರ್ವರು ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದೆ.

ಶಾಲಿನಿ (38) ನಾಪತ್ತೆಯಾದ ಮಹಿಳೆ ಎಂದು ಗುರುತಿಸಲಾಗಿದೆ.

ಸೆ.2 ರಂದು ಬೆಳಗ್ಗೆ ಯಾವುದೇ ಮಾಹಿತಿ ನೀಡದೆ ಮನೆ ಬಿಟ್ಟು ಹೋದವರು ಈವರೆಗೆ ವಾಪಸು ಮನೆಗೆ ಬಾರದೇ ನಾಪತ್ತೆಯಾಗಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಶಾಲಿನಿ 157 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದಾರೆ. ಕನ್ನಡ ತುಳು ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ನೀಲಿ ಮಿಶ್ರಿತ ಚೂಡಿ ಧರಿಸಿದ್ದು.

ಇವರು ಪತ್ತೆಯಾದಲ್ಲಿ ಮೂಡುಬಿದಿರೆ PS ಗೆ ಅಥವಾ ಪೊಲೀಸ್ ನಿಯಂತ್ರಣ ಕೋಣಿಗೆ ತಿಳಿಸಲು ದೂರವಾಣಿ ಸಂಖ್ಯೆ - 08258-236333, 0824-2220526, 0824- 2220801,22212108 ಗೆ ಸಂಪರ್ಕಿಸುವಂತೆ ಮೂಡುಬಿದಿರೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News