×
Ad

ಮಹಿಳೆ ನಾಪತ್ತೆ

Update: 2024-09-06 21:45 IST

ಉಪ್ಪಿನಂಗಡಿ: ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ್ದ ವಿವಾಹಿತ ಮಹಿಳೆಯೋರ್ವರು ಮನೆಗೆ ಬಾರದೇ ನಾಪತ್ತೆಯಾದ ಘಟನೆ ನೆಲ್ಯಾಡಿ ಗ್ರಾಮದ ಕೂವೆಕೊಪ್ಪ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಕೂವೆಕೊಪ್ಪ ನಿವಾಸಿ ನಾಗೇಶ ಎಂಬವರ ಪತ್ನಿ, ಮೂವರು ಮಕ್ಕಳ ತಾಯಿ ಭಾರತಿ (35) ನಾಪತ್ತೆಯಾದ ಮಹಿಳೆ. ಈ ಬಗ್ಗೆ ಈಕೆಯ ಪತಿ ನಾಗೇಶ ಎಂಬವರು ದೂರು ನೀಡಿದ್ದು, ಈಕೆ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಮನೆ ರಿಪೇರಿಗೆಂದು 85 ಸಾವಿರ ರೂ. ಸಾಲವನ್ನು ಪಡೆದಿದ್ದು, ಬಳಿಕ ಕಳೆದ ಜು.7ರಂದು ಇವರ ಪತಿ ಕೂಲಿ ಕೆಲಸಕ್ಕೆಂದು ಹೋದ ಬಳಿಕ ಈಕೆ ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ತೆರಳಿದ್ದಳು. ಇವಳು ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿರಬಹುದೆಂದು ನಾನು ಭಾವಿಸಿದ್ದೆ. ಆದರೆ ಆ ಬಳಿಕ ಅವಳು ನನಗೆ ಫೋನ್ ಮಾಡುವುದಾಗಲೀ ಅಥವಾ ಬೇರೆ ಯಾರಲ್ಲಿಯೂ ಫೋನ್ ಮಾಡಿ ಮಾತನಾಡುವುದಾಗಲೀ ಮಾಡಿಲ್ಲ. ಅವಳು ಸಾಲ ಕಟ್ಟಲು ಸಂಘಕ್ಕೆ ಬರುತ್ತಾಳೆಂದು ಭಾವಿಸಿ ನಾನು ಸುಮ್ಮನಿದ್ದೆ. ಆದರೆ ಆಕೆ ಅಲ್ಲಿಗೂ ಬಂದಿಲ್ಲ. ಈಗ ಅವಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆಕೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News