×
Ad

ಶೋರೂಮ್‌ನಿಂದ ದ್ವಿಚಕ್ರ ವಾಹನಗಳ ಕಳವು: ದೂರು

Update: 2023-09-01 20:12 IST

ಮಂಗಳೂರು, ಸೆ.1: ನಗರದ ಸೈಂಟ್ ಆ್ಯಗ್ನೆಸ್ ಸಮೀಪದ ದ್ವಿಚಕ್ರ ವಾಹನಗಳ ಶೋರೂಂನಿಂದ ಬೈಕ್ ಮತ್ತು ಸ್ಕೂಟರ್ ಕಳವಾಗಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಕದ್ರಿ ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ 8ಕ್ಕೆ ಹೌಸ್ ಕೀಪಿಂಗ್ ಕೆಲಸದ ಮಹಿಳೆ ಬಂದಾಗ ಶೋರೂಂನ ಒಳಗೆ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿತ್ತು. ಸಂಬಂಧಪಟ್ಟವರು ಶೋರೂಂ ಪರಿಶೀಲಿಸಿದಾಗ ಹಿಂಬಾಗಿಲಿನ ಚಿಲಕವನ್ನು ಮೀಟಿ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು. ಡಿಸ್‌ಪ್ಲೇಗೆ ಇಟ್ಟ ಬೈಕ್ ಮತ್ತು ಸ್ಕೂಟರ್‌ಗಳ ಪೈಕಿ ಒಂದು ಬೈಕ್ ಮತ್ತು ಬಿಳಿ ಬಣ್ಣದ ಆ್ಯಕ್ಟಿವಾ ಡಿಎಲ್‌ಎಕ್ಸ್ ಸ್ಕೂಟರ್‌ನ್ನು ಕಳವು ಮಾಡಿರುವುದು ಕಂಡುಬಂದಿದೆ ಎನ್ನಲಾಗಿದೆ.

ಬುಧವಾರ ಸಂಜೆ 7ರಿಂದ ಗುರುವಾರ ಬೆಳಗ್ಗೆ 8ರ ಮಧ್ಯೆ ಈ ಕಳವು ನಡೆದಿದೆ. ಕಳವಾದ ವಾಹನಗಳ ಅಂದಾಜು ಮೌಲ್ಯ 1,72,084 ರೂ. ಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News