×
Ad

"ಕಲ್ಲಡ್ಕ ಪ್ರಭಾಕರ್ ಭಟ್ ಕೆಣಕಿ ಉಳಿದ ಸರ್ಕಾರವಿಲ್ಲ, ಕರಾವಳಿ ಕಿಡಿಯಾದೀತು": ಪ್ರಚೋದನಕಾರಿ ಪೋಸ್ಟ್ ವಿರುದ್ಧ ಕ್ರಮಕ್ಕೆ ಆಗ್ರಹ

ಶಾಂತಿ ಕದಡುವ ಪರೋಕ್ಷ ಬೆದರಿಕೆ ಇದು ಎಂದು ಕಾನೂನು ಕ್ರಮಕ್ಕೆ ಆಗ್ರಹಿಸಿದ ಜನರು

Update: 2025-10-26 23:28 IST

ಮಂಗಳೂರು: ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ 'ದೀಪೋತ್ಸವ' ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಾಡಿದ ಭಾಷಣ ಧಾರ್ಮಿಕ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ವಸಂತ್ ಗಿಳಿಯಾರ್ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ “ಕಲ್ಲಡ್ಕ ಪ್ರಭಾಕರ್ ಭಟ್ ಕೆಣಕಿ ಉಳಿದ ಸರ್ಕಾರವಿಲ್ಲ, ಕರಾವಳಿ ಕಿಡಿಯಾದೀತು” ಎಂದು ಮಾಡಿರುವ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ. ಈ ಪೋಸ್ಟ್ ಶಾಂತಿ ಕದಡುವ ಪರೋಕ್ಷ ಬೆದರಿಕೆಯಾಗಿದೆ, ಹಾಗಾಗಿ ವಸಂತ್ ಗಿಳಿಯಾರ್ ವಿರುದ್ಧ ಕಾನೂನು ಕ್ರಮಕ್ಕೆ ಜನ ಆಗ್ರಹಿಸುತ್ತಿದ್ದಾರೆ.

“ಕಲ್ಲಡ್ಕ ಪ್ರಭಾಕರ್ ಭಟ್ ಎನ್ನುವ ಶಕ್ತಿಯನ್ನ ಕೆಣಕಿ ಉಳಿದ ಸರ್ಕಾರವಿಲ್ಲ! ಭಟ್ಟರ ಬಂಧನಕ್ಕೆ ಒತ್ತಡವಿದೆ ಎನ್ನುವ ಮಾತು ಕೇಳಿಸಿಕೊಂಡೆ. ಕರಾವಳಿ ಕಿಡಿ ಕಿಡಿಯಾದೀತು. ಪ್ರಭಾಕರ ಭಟ್ಟರ ಪ್ರಭಾವ ಏನೂ ಎನ್ನುವುದನ್ನು ಪ್ರದರ್ಶನ ಮಾಡುವ ರಿಸ್ಕಿಗೆ ಯಾರೂ ಕೈ ಹಾಕದೇ ಇರೋದು ಸೇಫ್! ಕರಾವಳಿ ಕರ್ನಾಟಕ ಶಾಂತಿಯಲ್ಲಿರಲಿ ಎನ್ನುವುದು ಸಲಹೆ” ಎಂದು ವಸಂತ್‌ ಗಿಳಿಯಾರ್ ಮಾಡಿರುವ ಪೋಸ್ಟ್‌ ನಲ್ಲಿದೆ.

ಈ ಪೋಸ್ಟ್‌ ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹೆಣ್ಣು ಮಕ್ಕಳಿಗೆ ಗೌರವ ಕೊಡದ ಅಯೋಗ್ಯರು ಇಂತವರು. ಇವರಿಂದ ನಾವೇನು ಕಲಿಯಬೇಕಿಲ್ಲ ಎಂದು ಜನರು ಕಮೆಂಟ್‌ ಮಾಡಿದ್ದಾರೆ.

Divyath K Poojary ಎಂಬ ಹೆಸರಿನವರು ಹೆಣ್ಣು ಮಕ್ಕಳಿಗೆ ರೆಸ್ಪೆಕ್ಟ್ ಕೊಡದ ಅಯೋಗ್ಯರು ಇಂತವರು. ಇವನ ಭಾಷಣ ಕೇಳಿ ಅರ್ಧದಿಂದ ಹೋದವ ನಾನು. ಧರ್ಮವನ್ನು ದ್ವೇಷ ಮಾಡಲು ಕಲಿಸೋ ಇವನಿಂದ ನಾವೇನು ಕಲಿಯಬೇಕಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Musthafa Mf ಎಂಬವರು, ನೀನು ಯಾವ ಸೀಮೆಯ ಪತ್ರಕರ್ತ ಮೊದಲು ಹೇಳು. ಮೊದಲು ಕಾನೂನಿಗೆ ಗೌರವ ಕೊಡೋದು ಕಲಿ. ಸುಪ್ರೀಂ ಕೋರ್ಟ್ ಏನು ಹೇಳಿದೆ ಗೊತ್ತಾ, ಅದು ಮೊದಲು ತಿಳ್ಕೋ. ಒಂದು ಧರ್ಮ ವನ್ನು ಗುರಿಯಾಗಿಸಿ ದ್ವೇಷ ಭಾಷಣ ಮಾಡುವನನ್ನು ಬಂಧನ ಮಾಡಬೇಕು. ಅದರ ಆಯೋಜಕರನ್ನು ಬಂಧಿಸಬೇಕು. ಈತ ಕಾನೂನಿಗಿಂತ ದೊಡ್ಡವನಲ್ಲ. ನೀ ಮೊದಲು ಪತ್ರಕರ್ತನ ಕೆಲಸ ಮಾಡು. ಹೆದರಿಸುವುದು ಬಿಡು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Yadava Kuntalapady ಎಂಬವರು ಬಂಧನ ಮಾಡಿದರೆ ಏನೂ ಆಗೊದಿಲ್ಲ. ಅದು ನಿನ್ನ ಭ್ರಮೆ. ಈಗ ರೋಡಿಗೆ ಬಂದು ಗಲಾಟೆ ಮಾಡಿದರೆ, ಮಾಡಿಸಿದವನು ನೇರ ಹೊಣೆ. ಅವನನ್ನೇ ಒದ್ದು ಒಳಗೆ ಹಾಕುವಂತ ಪ್ರಾಮಾಣಿಕ 2 ಪೋಲಿಸ್ ಅಧಿಕಾರಿಗಳು ಇದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ. ಆನಂದ ಕುಮಾರ ಹಾಲಗೆರೆ ಎಂಬ ಬಳಕೆದಾರರು, ಜಾಸ್ತಿ ತಲೆಕೆಡಿಸಿ ಇರೋದು ಬೇಡ ಹರಿಪ್ರಸಾದ್ ಗೃಹಮಂತ್ರಿ ಆಗಲಿ ನೋಡು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Sanatan Dharam ಎಂಬ ಖಾತೆ, ಈ ಪೋಸ್ಟ್‌ನಲ್ಲಿ ಪ್ರಚೋದನಕಾರಿ ವಿಷಯವಿರುವುದರಿಂದ ನಿಮಗೆ ಅಪಾಯವಾಗಬಹುದು! ಪೋಸ್ಟ್ ಅನ್ನು ಮಾರ್ಪಡಿಸಲು ಪ್ರಯತ್ನಿಸಿ ಎಂದು ಗಿಳಿಯಾರ್‌ ಗೆ ಸಲಹೆ ನೀಡಿದೆ. Prasanna Hegde ಎಂಬ ಫೇಸ್‌ ಬುಕ್‌ ಬಳಕೆದಾರರು, ನವೀನ್ ಸೂರಿಂಜೆಯ ಕಿತಾಪತಿ ಆದರೆ, ಒಂದು ಸಾರಿ ಹೊತ್ತಿ ಉರಿಯಲಿ ಬಿಡಿ. ಆಗ್ಲಾದ್ರೂ ನಮ್ಮ ಹಿಂದುಗಳಿಗೆ ಬುದ್ದಿ ಬರತ್ತಾ ನಿದ್ದೆಯಿಂದ ಏಳ್ತಾರ ಅಂತ ಎಂದು ಪ್ರತಿಕ್ರಿಯಿಸಿದ್ದಾರೆ.

Shivappa Gowda ಎಂಬವರು, ಇದು ಮರೀ ಖರ್ಗೆಯ ಅಡ್ವಾನ್ಸ್ ಅಂತಿಮ ವಿದಾಯದ ಸಂಕೇತ ಅಷ್ಟೇ ಬ್ರೋ.. ಎಂದು ಕಮೆಂಟ್‌ ಮಾಡಿದ್ದಾರೆ. Prakash KT ಎಂಬ ಬಳಕೆದಾರರು, ಪ್ರಭಾಕರ್ ಭಟ್ ವಿಚಾರದಲ್ಲಿ ಸರಕಾರ ಏನಾದ್ರೂ ಎಡವಟ್ಟು ಮಾಡಿದರೆ, ನನ್ನ ಪ್ರಕಾರ, ಕರಾವಳಿ ಜಿಲ್ಲೆಗಳಲ್ಲಿ, ಸಾರಿಗೆ, ಕಾರ್ಮಿಕ, ವೈದ್ಯಕೀಯ, ಶಿಕ್ಷಣ, ಹೋಟೆಲ್ ಸಹಿತ ಕೆಲ ಉದ್ಯಮಗಳು, ಸರಕಾರಕ್ಕೆ ತಕ್ಕ ಪಾಠ ಕಲಿಸಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Shashikanth Bc ಎಂಬವರು, ಮೊದಲು …ಮಗ ಪ್ರಿಯಾಂಕನನ್ನು ಮುಗಿಸಬೇಕು, ಜೈ ಭೀಮ್ ಎಂದು ಬೆದರಿಕೆ ಹಾಕಿದ್ದಾರೆ.

Full View








 





 



















Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News