ತುಂಬೆ : ಮಾದಕ ಮುಕ್ತ ಅಭಿಯಾನ, ಕಾಲ್ನಡಿಗೆ ಜಾಥಾ
ಬಂಟ್ವಾಳ : ತುಂಬೆ ಮುಹಿಯುದ್ದೀನ್ ಜುಮಾ ಮಸೀದಿಯ ಆಶ್ರಯದಲ್ಲಿ ಮಾದಕ ಮುಕ್ತ ಅಭಿಯಾನ ಸಮಿತಿಯ ವತಿಯಿಂದ ತುಂಬೆಯ ಕುನಿಲ್ ಇಲ್ಮ್ ಸ್ಕೂಲ್ ಆವರಣದಿಂದ ತುಂಬೆ ಜಂಕ್ಷನ್ ತನಕ ಮಾದಕ ಮುಕ್ತ ಅಭಿಯಾನದ ಸಲುವಾಗಿ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು.
ಸ್ಥಳೀಯ ಮಸೀದಿ ಖತೀಬ್ ಹಾಜಿ ಅಬೂಸಾಲಿಹ್ ಫೈಝಿ ಪ್ರಾರ್ಥನೆ ನೆರವೇರಿಸಿದರು.
ಬಿ.ಎ. ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಬಿ.ಅಬ್ದುಲ್ ಸಲಾಂ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಇದರ ಆಡಳಿತ ಅಧಿಕಾರಿ ರೆI ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ಕಾಲ್ನಡಿಗೆ ಜಾಥಾ ಕ್ಕೆ ಪಾರಿವಾಳವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು.
ಜಾಥಾದಲ್ಲಿ ತುಂಬೆ ಪದವಿ, ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ , ಫಾದರ್ ಮುಲ್ಲರ್ ನರ್ಸಿಂಗ್ ಸಂಸ್ಥೆ, ಬಿ.ಎ. ಕೈಗಾರಿಕಾ ಸಂಸ್ಥೆ , ಕುನೀಲ್ ಸ್ಕೂಲ್, ಹಿದಾಯತುಲ್ ಇಸ್ಲಾಂ ಮದ್ರಸ, ದ.ಕ.ಜಿ.ಪ.ಹಿ.ಪ್ರಾ.ಶಾಲೆ ತುಂಬೆ ಇಲ್ಲಿನ ವಿದ್ಯಾರ್ಥಿಗಳು ಹಾಗೂ ತುಂಬೆ ಗ್ರಾಮ ಪಂಚಾಯಿತ್ ಸಿಬ್ಬಂದಿಗಳು, ತುಂಬೆಯ
ಎಸ್ಕೆಎಸ್ಸೆಸ್ಸೆಫ್, ಕ್ರೆಸೆಂಟ್ ಯಂಗ್ ಮೆನ್ಸ್ , ಎಸ್ಸೆಸ್ಸೆಫ್, ಎಂ.ಜೆ.ಎಂ, ವೆಲ್ಫೇರ್ ಸಂಸ್ಥೆ , ಇಮಾ ವಳವೂರು, ಆಟೋ ರಿಕ್ಷಾ ಚಾಲಕ - ಮಾಲಿಕರು ತುಂಬೆ ಇದರ ಸದಸ್ಯರುಗಳು ಭಾಗವಹಿಸಿದರು.
ಬಳಿಕ ನಡೆದ ಸಭೆಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ತುಂಬೆ ದಿಕ್ಸೂಚಿ ಭಾಷಣ ಮಾಡಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಡಾ. ರಘುರಾಮ್ ಶೆಟ್ಟಿ, ತುಂಬೆ ಬಿ.ಎ.ಐ.ಟಿ.ಐ. ಪ್ರಾಂಶುಪಾಲ ನವೀನ್ ಕುಮಾರ್ ಕೆ.ಎಸ್, ತುಂಬೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಇಮ್ತಿಯಾಜ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಗಣೇಶ್ ಸುವರ್ಣ, ಕ್ರೆಸೆಂಟ್ ಯಂಗ್ ಮೆನ್ಸ್ ಅಧ್ಯಕ್ಷ ಇರ್ಫಾನ್. ಟಿ., ಎಸ್ಕೆಎಸ್ಸೆಸ್ಸೆಫ್ ತುಂಬೆ ಶಾಖಾದ್ಯಕ್ಷ ಬಶೀರ್, ಎಸ್ಸೆಸ್ಸೆಫ್ ತುಂಬೆ ಶಾಖೆಯ ಅಧ್ಯಕ್ಷ ಅಮಿನ್ ಟಿ.ಎ. ಮೊದಲಾದವರು ಉಪಸ್ಥಿತರಿದ್ದರು.
ರೆI ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ಮಾದಕ ವಸ್ತುಗಳಿಗೆ ಕಡಿವಾಣ ಹಾಕುವ ಪ್ರತಿಜ್ಞೆ ಬೋಧಿಸಿದರು. ಜಗದೀಶ್ ರೈ, ಸಾಯಿರಾಮ್ ಜೆ.ನಾಯಕ್
ಮೂಸಬ್ಬ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಝೀಝ್ ಟಿ.ಎ, ಝಹೂರ್ ಅಹ್ಮದ್ , ಅಬೂಬಕ್ಕರ್ ಹಾಜಿ, ಖಲಂದರ್, ಸದಾಶಿವ.ಡಿ ತುಂಬೆ, ಕುನೀಲ್ ಸ್ಕೂಲಿನ ಸಲೀನಾ ಎಂ.ಬಿ, ಸರಕಾರಿ ಪ್ರಾಥಮಿಕ ಶಾಲೆ ಶಕುಂತಲಾ , ಶಮ್ಮಾನ್, ಶಂಶುದ್ದೀನ್, ಮೊಹಮ್ಮದ್ ತೋಡಾರ್, ಸುಲೈಮಾನ್ ಕೆ.ಪಿ, ಇರ್ಷಾದ್ ಕೆ.ಟಿ., ರಹೀಮ್ ಎ.ಕೆ.ಎಂ., ಇಲ್ಯಾಸ್ ಎ.ಕೆ.ಎಂ. ರಶೀದ್ ಕೆ.ಟಿ., ಲತೀಫ್ ಇಮಾಮಿ, ಶಮೀರ್ ಅರಫತುಲ್ಲ, ಬಶೀರ್ ಎಸ್. ಪಿ., ನಿಯಾಝ್ ರೆಡ್‍ರೋಸ್, ಝಹೀರ್ ಅಬ್ಬಾಸ್ ಸಹಕರಿಸಿದರು.
ಸಮಿತಿ ಸಂಚಾಲಕ ಬಿ. ಅಬ್ದುಲ್ ಕಬೀರ್ ಸ್ವಾಗತಿಸಿ, ವಂದಿಸಿದರು. ಸೈಯದ್ ಮದನಿ ಕಾಲೇಜು ಉಳ್ಳಾಲ ಇದರ ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಕಾರ್ಯಕ್ರಮ ನಿರ್ವಹಿಸಿದರು.