×
Ad

ತೋಡಾರು: ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ

Update: 2026-01-04 19:47 IST

ಮೂಡುಬಿದಿರೆ: ಇಂದಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಕ್ಯಾನ್ಸರ್ ಮಹಾಮಾರಿಯಾಗಿ ಕಾಡುತ್ತಿದೆ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಬರುವ ಮುನ್ನವೇ ಜಾಗೃತಿ ವಹಿಸುವುದು ಮುಖ್ಯ ಎಂದು ತೋಡಾರು ಬದ್ರಿಯ ಸುನ್ನೀ ಜುಮ್ಮಾ ಮಸೀದಿಯ ಧರ್ಮಗುರು ಐ.ಕೆ. ಮೂಸಾದಾರಿ ಹೇಳಿದರು.

ಅವರು ಎಸ್.ಕೆ.ಎಸ್.ಎಸ್.ಎಫ್ ಮೂಡುಬಿದಿರೆ ವಲಯ, ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇವುಗಳ ಜಂಟಿ ಆಶ್ರಯದಲ್ಲಿ ತೋಡಾರುವಿನ ದಾರುಸ್ಸಲಾಂ ಕೇಂದ್ರ ಮದರಸದಲ್ಲಿ ಆನುವಾರ ನಡೆದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಮತ್ತು ಇಂತಹ ಶಿಬಿರಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಟ್ರಸ್ಟ್‌ನ ಸಂಸ್ಥಾಪಕಿ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಮಾತನಾಡಿ, "ಕ್ಯಾನ್ಸರ್ ರೋಗವನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚಿದರೆ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯ. ಮೂಡುಬಿದಿರೆ ತಾಲೂಕಿನಾದ್ಯಂತ ವಿವಿಧ ಶಾಲೆಗಳಲ್ಲಿ ಹಾಗೂ ಬಡ ಜನರಿಗಾಗಿ ಇಂತಹ ಉಚಿತ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮಾಜ ಸೇವೆ ಮಾಡುವ ಗುರಿ ನಮ್ಮದಾಗಿದೆ," ಎಂದು ತಿಳಿಸಿದರು.

ತೋಡಾರು ಬದ್ರಿಯಾ ಜುಮ್ಮಾ ಮಸ್ಜೀದ್‌ನ ಅಧ್ಯಕ್ಷ, ಎಸ್.ಕೆ.ಎಸ್.ಎಸ್.ಎಫ್ ಮೂಡುಬಿದಿರೆ ವಲಯದ ಕೋಶಾಧಿಕಾರಿ ಎಮ್.ಎ.ಎಸ್ ಆಸೀಫ್ ಇಕ್ಬಾಲ್, ಎಸ್.ಕೆ.ಎಸ್.ಎಸ್.ಎಫ್ ಮೂಡುಬಿದಿರೆ ವಲಯದ ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ, ಪ್ರಧಾನ ಕಾರ್ಯದರ್ಶಿ ನವಾಫ್ ಪಡು, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಗಾಂಧಿ ನಗರ, ಎಸ್.ಕೆ.ಎಸ್.ಎಸ್.ಎಫ್ ನಿಗಮದ ಅಧ್ಯಕ್ಷ ಮನ್ಸೂರ್ ಪಡ್ಡಂದಡ್ಕ, ಉಪಾಧ್ಯಕ್ಷ ಅಮೀರ್ ಹಂಡೇಲ್, ತೋಡಾರು ಬದ್ರಿಯಾ ಜುಮ್ಮಾ ಮಸ್ಜೀದ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್, ತೋಡಾರು ಬದ್ರಿಯಾ ಜುಮ್ಮಾ ಖಜಾಂಚಿ ಉಂಞಾಕ ತೋಡಾರು ಬದ್ರಿಯಾ ಮಸ್ಜೀದ್‌ನ ಉಪಾಧ್ಯಕ್ಷರುಗಳಾದ ಹಕೀಂ ಮಲ್ಲೂರು, ಎಸ್.ಕೆ.ಎಸ್.ಎಸ್.ಎಫ್ ಅಶ್ರಫ್ ಗುತ್ತು, ಪೇರಂದಡ್ಕ ಕ್ಲಸ್ಟರ್‌ನ ಅಧ್ಯಕ್ಷ ಖಲೀದ್, ಎಸ್.ಕೆ.ಎಸ್.ಎಸ್.ಎಫ್ ತೋಡರ್ ಯುನಿಟ್‌ನ ಅಧ್ಯಕ್ಷ ಅನ್ಸಾರ್ ನಡುಮನೆ, ತೋಡಾರು ದಾರುಸ್ಸಲಾಂ ಕೇಂದ್ರ ಮದರಸದ ಪ್ರಾಂಶುಪಾಲ ಅಬ್ದುಲ್ ರಝಾಕ್ ಹಜಾರಿ, ತೋಡಾರು ದಾರುಸ್ಸಲಾಂ ಕೇಂದ್ರ ಮದರಸದ ಅಸ್ಗರ್ ಆಲಿ ಯಮನ್, ಮೂಡುಬಿದಿರೆ ಇಬಾದ್‌ನ ಅಧ್ಯಕ್ಷ ಅಲ್ತಾಫ್ ಮುಸ್ಲಿಯರ್, ದಾರುಸ್ಸಲಾಂ ಕೇಂದ್ರ ಮದರಸದ ಅಧ್ಯಕ್ಷ ಫಾರೂಕ್ ಹಾಸ್ಕೋ, ಪ್ರಧಾನ ಕಾರ್ಯದಶಿ೯ ಟಿ.ಎಚ್ ಫಾರೂಕ್, ಎಸ್.ಕೆ.ಎಸ್.ಎಸ್.ಎಫ್ ಹಿದಾಯತ್ ನಗರ ಯುನಿಟ್ ಅಧ್ಯಕ್ಷ ನಸೀಫ್, ಎಸ್.ಕೆ.ಎಸ್.ಎಸ್.ಎಫ್ ತೋಡಾರ್ ಕ್ಲಸ್ಟರ್‌ನ ಪ್ರಧಾನ ಕಾರ್ಯದಶಿ೯ ನಾಸಿರ್ ಫೈಜಿ ಉಪಸ್ಥಿತರಿದ್ದರು. ಸ್ವಲಿಹ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News