×
Ad

ದ.ಕ. ಜಿಲ್ಲಾ ಪೊಲೀಸ್ ಇಲಾಖಾ ವ್ಯಾಪ್ತಿಯಲ್ಲಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಆರಂಭ

Update: 2025-05-30 22:34 IST

ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ನೂತನ ಎಸ್ಪಿಯಾಗಿ ಡಾ. ಅರುಣ್ ಅಧಿಕಾರ ಸ್ವೀಕಾರ

ಮಂಗಳೂರು: ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ನೂತನ ಎಸ್ಪಿಯಾಗಿ ಡಾ. ಅರುಣ್ ಅವರು ಅಧಿಕಾರ ಸ್ವೀಕರಿಸಿದ ದಿನವೇ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಈ ತಿಂಗಳ 31ಕ್ಕೆ (ಶನಿವಾರ) 4 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಒಂದೇ ಠಾಣೆ ಅಥವಾ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್ಸೈ, ಎಚ್‌ಸಿ ಮತ್ತು ಪಿಸಿಗಳ ಮಾಹಿತಿಯನ್ನು ಮೇ 31ರ ಸಂಜೆ 4 ಗಂಟೆಯೊಳಗೆ ಎಸ್ಪಿ ಕಚೇರಿಗೆ ನೀಡುವಂತೆ ಸೂಚಿಸಲಾಗಿದೆ.

ತಪ್ಪುಮಾಹಿತಿಯನ್ನು ನೀಡಿದರೆ ಸಂಬಂಧಿಸಿದ ಠಾಣಾಧಿಕಾರಿ/ಠಾಣಾ ಬರಹಗಾರರ ಮೇಲೆ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಪದೋನ್ನತಿ ಹೊಂದಿ/ವರ್ಗಾವಣೆಗೊಂಡು ಬಳಿಕ 6 ತಿಂಗಳೊಳಗೆ ಮತ್ತದೇ ಠಾಣೆಯಲ್ಲಿ ಮುಂದುವರಿದಿರುವುದು ಅಥವಾ ಕೋರಿಕೆ ಮೇರೆಗೆ ಅದೇ ಠಾಣೆಯಲ್ಲಿ ಕರ್ತವ್ಯದಲ್ಲಿ ಮುಂದುವರಿಯುತ್ತಿರುವವರ ವಿವರವನ್ನು ಕೂಡಾ ನೀಡಬೇಕು ಎಂದು ಸೂಚಿಸಲಾಗಿದೆ. ಪದೋನ್ನತಿ ಹೊಂದಿದ ಹಾಗೂ ಕೋರಿಕೆ ಮೇರೆಗೆ ಮುಂದುವರಿದ ದಿನಾಂಕವನ್ನು ಕೂಡ ನಮೂದಿಸಲು ಸೂಚಿಸಲಾಗಿದೆ. ಎರಡು ವರ್ಷದೊಳಗೆ ವಯೋನಿವೃತ್ತಿ ಹೊಂದುವವರ ಹಾಗೂ ಪತಿ-ಪತ್ನಿ ಸರಕಾರಿ ನೌಕರರಾಗಿದ್ದಲ್ಲಿ ಆ ಬಗ್ಗೆಯೂ ಮಾಹಿತಿಯನ್ನು ನಮೂದಿಸಬೇಕು ಎಂದು ತಿಳಿಸಲಾಗಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News