×
Ad

ಕಣಚೂರು ಪಬ್ಲಿಕ್ ಸ್ಕೂಲ್‌ನ ಸೀನಿಯರ್-ಜೂನಿಯರ್ಸ್ ಫುಟ್ಬಾಲ್ ತಂಡಕ್ಕೆ ಟ್ರೋಫಿ

Update: 2024-08-17 18:45 IST

ಮಂಗಳೂರು : ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ಫುಟ್ಬಾಲ್ ಸ್ಪರ್ಧೆಯಲ್ಲಿ ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್‌ನ ಜೂನಿಯರ್ ಮತ್ತು ಸೀನಿಯರ್ ಫುಟ್ಬಾಲ್ ತಂಡವು ವಿನ್ನರ್ ಟ್ರೋಫಿಯನ್ನು ಗೆದ್ದುಕೊಂಡಿತು.

ಕಣಚೂರು ಜೂನಿಯರ್ ತಂಡವು ಮೂಡುಬಿದರೆಯ ಆಲ್ ಫುರ್‌ಖಾನ್ ಶಾಲಾ ತಂಡವನ್ನು 3-0 ಗೋಲಿನಿಂದ ಮಣಿಸಿತು ಹಾಗೆಯೇ ಸೀನಿಯರ್ ತಂಡವು ಅಂತಿಮ ಪಂದ್ಯದಲ್ಲಿ ಮಣಿಪಾಲ ಶಾಲಾ ತಂಡವನ್ನು 1-0 ಅಂತರದಿಂದ ಸೋಲಿಸಿತು. ಪ್ರಪ್ರಥಮ ಬಾರಿಗೆ ಕಣಚೂರು ವಿದ್ಯಾಸಂಸ್ಥೆಯ ಬಾಲಕರ ಫುಟ್ಬಾಲ್ ತಂಡವು ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಇಂಡಿಪೆಂಡೆನ್ಸ್ ಕಪ್-2024 ರ ಚಾಂಪಿಯನ್ ಶಿಪ್ ಗೆದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News