×
Ad

ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಸಿನಿಮಾಗಳ ಕಡೆಗಣನೆ: ಡಾ. ರಾಜೇಂದ್ರ ಸಿಂಗ್ ಬಾಬು ಆರೋಪ

Update: 2026-01-25 21:49 IST

ಡಾ. ರಾಜೇಂದ್ರ ಸಿಂಗ್ ಬಾಬು

ಮಂಗಳೂರು: ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಚಿತ್ರಗಳನ್ನು ಕಡೆಗಣಿಸುಲಾಗುತ್ತಿದೆ ಎಂದು ಖ್ಯಾತ ಚಲನ‌ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ತುಳು ಮತ್ತು ಇತರ ಪ್ರಾದೇಶಿಕ ಭಾಷಾ ಚಿತ್ರಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಶಸ್ತಿ ಮತ್ತು ಸಹಾಯಧನ ನೆರವನ್ನು ತುಳು ಚಿತ್ರಗಳಿಗೆ ವಿಸ್ತರಿಸಿದೆ. ಪ್ರತಿ ವರ್ಷ ಒಂದು ಪ್ರಾದೇಶಿಕ ಭಾಷಾ ಚಿತ್ರಕ್ಕೆ ಪ್ರಶಸ್ತಿ ನೀಡುತ್ತದೆ. ತ್ರೈಮಾಸಿಕ ಪ್ರಶಸ್ತಿಗಳನ್ನು ಪಡೆಯುವ ಈ ಚಿತ್ರಗಳು ಸ್ವರ್ದಿಸಿವೆ.

16ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಎರಡನೆ ಮತ್ತು ಮೂರನೇ ಪ್ರಶಸ್ತಿಗಳನ್ನು ತುಳು ಚಿತ್ರಗಳು ಪಡೆದಿದ್ದವು. ಇಂದು ಈ ಬಾರಿ 17ನೇ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಯಾವುದೇ ತುಳು ಚಿತ್ರವನ್ನು ಪರಿಗಣಿಸಿಲ್ಲ ಎಂದವರು ತಿಳಿಸಿದ್ದಾರೆ.

ನಾನು ತುಳುವಿನಲ್ಲಿ ನಿರ್ದೇಶಿಸಿದ ಬಿದ್೯ದ ಕಂಬುಲ' ಚಿತ್ರವನ್ನು ಸ್ವರ್ಧೆಗಾಗಿ ಕಳುಹಿಸಿದೆ. ತುಳುನಾಡಿನ ವಿಶಿಷ್ಟ ಜಾನಪದ ಕ್ರೀಡೆಯಾಗಿರುವ ಕಂಬಳದ ಹಿನ್ನಲೆ ಕಥೆಯಿದು. ಸುಮಾರು 700 ವರ್ಷಗಳ ಇತಿಹಾಸ ಇರುವ ಕಂಬಳ ತುಳುನಾಡಿನ ಸಾಂಸ್ಕೃತಿಕ ಕ್ರೀಡೆ, ಮಾನ್ಯ ಮುಖ್ಯಮಂತ್ರಿಗಳು ಈ ಸಾರಿಯ ಬಜೆಟ್‌ನಲ್ಲಿ ಕಂಬಳ ಕ್ರೀಡೆಗೆ ವಿಶೇಷ ಅನುದಾನ ಮತ್ತು ಪ್ರೊತ್ಸಾಹ ನೀಡುತ್ತೇನೆ ಎಂದು ಘೋಶಿಸಿದ್ದರು. ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರ ವನ್ನು ತಿರಸ್ಕರಿಸುವ ಮೂಲಕ ತುಳುನಾಡು ಮತ್ತು ತುಳುನಾಡು ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳಿಗೆ ಬೆಂಬಲಿ ಸದೆ ಪರಿಗಣಿಸದೆ ಇರುವುದರ ಮೂಲಕ ಸಂಬಂಧ ಪಟ್ಟವರು ತುಳು ಚಿತ್ರರಂಗದ ಮೇಲೆ ಕಡೆಗಣಿಸುವ ವ್ಯವಸ್ತೆಯನ್ನು ಸೃಷ್ಟಿಸಿದ್ದಾರೆ.

17ನೇ ಚಿತ್ರೋತ್ಸವದಲ್ಲಿ ಮಲೆಯಾಳಂನ 6 ಚಿತ್ರಗಳು ಮತ್ತು ಮಾರಾಠಿಯ 4 ಚಿತ್ರಗಳಿಗೆ ಮನ್ನಣೆ ಹಾಕುವ ಮೂಲಕ ಕನ್ನಡ ನಾಡಿನಲ್ಲಿಯೆ ನಾವು ಅನಾಥರಾಗಿರುವುದು ದುರಂತವೆ ಸರಿ ಎಂದವರು ತಿಳಿಸಿದ್ದಾರೆ.

ತುಳು ಭಾಷೆಯನ್ನು ರಾಜ್ಯದ ಎರಡನೆ ಆಡಳಿತ ಭಾಷೆಯಾಗಿ ಪರಿಗಣಿಸಬೆಕಾಗಿದೆ ಅದನ್ನು ಪರಿಚ್ಚೆದಕ್ಕೆ ಸೇರಿಸಬೇಕು ಎನ್ನುವ ಒತ್ತಾಯ. ಒತ್ತಡಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ತುಳು ಚಿತ್ರಗಳನ್ನು 17ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಸ್ವರ್ಧಾಮಾನಕ್ಕೆ ಆಯ್ಕೆ ನೀಡದೆ ಇರುವುದು ಅನ್ಯಾಯ ಮಾಡಿದಂತಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಸೂಕ್ತ ಆದೇಶ ನೀಡಿ, ತುಳು ಚಿತ್ರರಂಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ನಿರ್ದೇಶಕ ಡಾ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News