×
Ad

ಮಾದಕ ವಸ್ತಯ ಸೇವನೆ ಆರೋಪ: ಇಬ್ಬರ ಬಂಧನ

Update: 2026-01-01 21:53 IST

ಮಂಗಳೂರು, ಜ.1: ಮಾದಕ ವಸ್ತು ಸೇವನೆ ಮಾಡಿ ಆರೋಪದ ಮೇಲೆ ಬರ್ಕೆ ಮತ್ತು ಉರ್ವ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕೇರಳದ ಎರ್ನಾಕುಲಂ ನಿವಾಸಿ ನಿಖಿಲ್ ಪಿ. ಎಸ್(19) ಎಂಬಾತ ಡಿ.31ರಂದು ಲೇಡಿಹಿಲ್ ಬಳಿ ಅಮಲಿನಲ್ಲಿದ್ದಂತೆ ಕಂಡು ಬಂದಿದ್ದ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡ.

ಕೇರಳದ ಕೊಲ್ಲಂ ನಿವಾಸಿ ಅಂಬುಜ್ ಎ. (19) ಎಂಬಾತ ಕೊಟ್ಟಾರ ಚೌಕಿಯಲ್ಲಿ ಸಿಗರೇಟ್ ಸೇದುತ್ತಿದ್ದು, ಪೊಲೀಸರನ್ನು ಕಂಡೊಡನೆ ಸಿಗರೇಟನ್ನು ಚರಂಡಿಗೆ ಎಸೆದಿದ್ದ. ವಿಚಾರಣೆಗೆ ಒಳ ಪಡಿಸಿದಾಗ ಸಿಗರೇಟಿನ ಒಳಗಡೆ ಮಾದಕ ದ್ರವ್ಯ ತುಂಬಿಸಿ ಸೇದುತ್ತಿದ್ದುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇಬರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಇಬ್ಬರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News