ಕುಡುಪು ಆಶ್ರಫ್ ಗುಂಪುಹತ್ಯೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು
Update: 2025-05-31 16:10 IST
ಸಾಂದರ್ಭಿಕ ಚಿತ್ರ
ಮಂಗಳೂರು : ಕುಡುಪು ಆಶ್ರಫ್ ಗುಂಪುಹತ್ಯೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆಶ್ರಫ್ ಗುಂಪುಹತ್ಯೆ ಪ್ರಕರಣದ 10ನೇ ಆರೋಪಿ ರಾಹುಲ್ ಮತ್ತು 20ನೇ ಆರೋಪಿ ಸುಶಾಂತ್‌ಗೆ ಜಾಮೀನು ಮಂಜೂರಾಗಿದೆ.
ಇಬ್ಬರು ಆರೋಪಿಗಳ ಹೆಸರು ಎಫ್‌ಐಆರ್‌ನಲ್ಲಿ ಉಲ್ಲೇಖವಿಲ್ಲ ಎಂಬ ಕಾರಣವನ್ನು ನೀಡಿ ಜಾಮೀನು ಕೋರಲಾಗಿತ್ತು.