×
Ad

ಉಳ್ಳಾಲ: ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ

Update: 2024-02-21 15:43 IST

ಉಳ್ಳಾಲ: ಸಾಲಿಡಾರಿಟಿ ಯೂತ್ ಮೂಮೆಂಟ್, ಸಮಾಜ ಸೇವಾ ವಿಭಾಗ ಜಮಾಅತೇ ಇಸ್ಲಾಮಿ ಹಿಂದ್ ಉಳ್ಳಾಲ, ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಸಂಯುಕ್ತಾಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ತೊಕ್ಕೊಟ್ಟಿನ ಮಸ್ಜಿದ್ ಹುದಾದಲ್ಲಿ ನಡೆಯಿತು.

ಅತಿಥಿಗಳಾಗಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಸಂಚಾಲಕ ನಝೀರ್, ಕೆ. ಎಂಸಿ ರಕ್ತ ನಿಧಿಯ ನಿರ್ದೇಶಕ ರಾಘವೇಂದ್ರ ಮಸೀದಿಯ ಅಧ್ಯಕ್ಷ ಹಸನಬ್ಬ, ಜಮಾಅತ್ ಇಸ್ಲಾಮಿ ಉಳ್ಳಾಲ ಘಟಕದ ಅಧ್ಯಕ್ಷಯು. ಎ ಅಬ್ದುಲ್ ಕರೀಮ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಾಲಿಡಾರಿಟಿ ಯೂತ್ ಮುಮೆಂಟ್ ಅಧ್ಯಕ್ಷ ಡಾ. ಝೈನುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಮಾಜ ಸೇವಾ ವಿಭಾಗದ ಸಂಚಾಲಕ ಇಸ್ಹಾಕ್ ಕಲ್ಲಾಪು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುಲ್ತಾನ್ ನಬೀಲ್ ಕಿರಾಅತ್ ಪಠಿಸಿದರು. ನಿಝಾಮುದ್ದೀನ್ ಉಮರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News