×
Ad

ಉಪ್ಪಿನಂಗಡಿ: ಮಗಳ ಮೇಲೆ ಅತ್ಯಾಚಾರ ಆರೋಪ; ಪೋಕ್ಸೊ ಕಾಯ್ದೆಯಡಿ ತಂದೆಯ ಬಂಧನ

Update: 2023-08-17 22:06 IST

ಉಪ್ಪಿನಂಗಡಿ: ತಂದೆಯೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭೀಣಿಯನ್ನಾಗಿಸಿದ್ದಾನೆ ಎನ್ನಲಾದ ಕೃತ್ಯ ಗೋಳಿತ್ತೊಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದ್ದು, ಪೋಕ್ಸೊ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ.

ಗೋಳಿತೊಟ್ಟು ಗ್ರಾ.ಪಂ. ವ್ಯಾಪ್ತಿಯ ನಿವಾಸಿಯೋರ್ವ ತನ್ನ ಮಗಳ ಮೇಲೆ ಕೆಲವು ತಿಂಗಳ ಹಿಂದೆ ಅತ್ಯಾಚಾರವೆಸಗಿದ್ದು, ಮಗಳ ಆರೋಗ್ಯದ ಮೇಲೆ ವ್ಯತ್ಯಾಸಗಳಾದಾಗ ತಾಯಿ ಮಗಳನ್ನು ಆ.16ರಂದು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮಗಳು ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಸಂತ್ರಸ್ಥೆ ನೀಡಿದ ದೂರಿನಂತೆ ಪೋಕ್ಸೊ ಕಾಯ್ದೆ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News