×
Ad

ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

Update: 2023-07-31 22:40 IST

ಉಪ್ಪಿನಂಗಡಿ: ಇಲ್ಲಿನ ಪಂಜಳ ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸೋಮವಾರ ರಾತ್ರಿ ಪತ್ತೆಯಾಗಿದೆ.

ನದಿಯ ಬದಿಯಲ್ಲಿರುವ ಮರದ ಕೊಂಬೆಗೆ ಸಿಲುಕಿದಂತಿರುವ ಈ ಮೃತದೇಹದಲ್ಲಿ ಕೆಂಪು ಬಣ್ಣದ ರವಿಕೆ ಇದ್ದು, ಹಸಿರು ಬಣ್ಣದ ಸೀರೆ ಅಥವಾ ಲಂಗದಂತಹ ವಸ್ತ್ರ ಕಾಣಿಸಿದೆ. ಮೃತದೇಹ ಮೇಲ್ನೋಟಕ್ಕೆ ಸಾವನ್ನಪ್ಪಿ ಕೆಲ ದಿನಗಳು ಕಳೆದಂತಿದ್ದು, ಸಂಶಯಾಸ್ಪದ ಸಾವು ಆಗಿರುವ ಸಾಧ್ಯತೆ ಇದೆ. ಶವ ಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News