×
Ad

ಉಪ್ಪಿನಂಗಡಿ: ಜು.19ರಂದು ಎಸ್‌ವೈಎಸ್ ರಾಜ್ಯ ಕಾರ್ಯಕಾರಿಣಿ ಸಭೆ

Update: 2023-07-17 22:56 IST

ಉಪ್ಪಿನಂಗಡಿ: ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯ ಕಾರ್ಯಕಾರಿ ಸಭೆಯು ಜುಲೈ 19ರ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 9ರ ತನಕ ಉಪ್ಪಿನಂಗಡಿ ತಾಜುಲ್ ಉಲಮಾ ಸೆಂಟರ್ ಕರ್ವೇಲ್‌ನಲ್ಲಿ ನಡೆಯಲಿದೆ.

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಇಸ್ಮಾಈಲ್ ಅಲ್ ಹಾದೀ ಉದ್ಘಾಟಿಸಲಿದ್ದು, ರಾಜ್ಯಾಧ್ಯಕ್ಷ ಅಲ್‌ಹಾಜ್ ಅಬ್ದುಲ್ ಹಫೀಳ್ ಸಅದಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮಾಜಿ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸಂ ಝೈನಿ ಕಾಮಿಲ್, ನಾಯಕರಾದ ಸಯ್ಯಿದ್ ಹಾಮೀಂ ಅಲ್ ಬುಖಾರಿ ಬಾಳೆಹೊನ್ನೂರು, ಸಯ್ಯಿದ್ ಶಾಫೀ ನಈಮಿ ಸಕಲೇಶಪುರ, ಬಶೀರ್ ಸಅದಿ ಬೆಂಗಳೂರು, ಹಾಫಿಝ್ ಆದಂ ಹಝ್ರತ್ ಚಿತ್ರದುರ್ಗ, ಎಂಬಿ ಮುಹಮ್ಮದ್ ಸಾದಿಕ್, ಅಡ್ವಕೇಟ್ ಹಂಝತುಲ್ಲಾ ಉಡುಪಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಖ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News