ಉಪ್ಪಿನಂಗಡಿ | ಶ್ರಮದಾನದ ಮೂಲಕ ರಸ್ತೆ ದುರಸ್ತಿ
ಉಪ್ಪಿನಂಗಡಿ : ಖಾಸಗಿ ಬಸ್ ನೌಕರರ ಸಂಘ (ರಿ) ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಇದರ ವತಿಯಿಂದ ಖಾಸಗಿ ಬಸ್ ನೌಕರರ ಸಂಘದ ಅಧ್ಯಕ್ಷರಾದ ಸಿದ್ದಿಕ್ ಕೆಂಪಿ ಇವರ ನೇತೃತ್ವದಲ್ಲಿ ಉಪ್ಪಿನಂಗಡಿಯಿಂದ ಕಲ್ಲೇರಿಗೆ ಹೋಗುವ ರಸ್ತೆಯಲ್ಲಿದ್ದ ದೊಡ್ಡ ದೊಡ್ಡ ಗುಂಡಿಗಳನ್ನು ಜೆಸಿಬಿ ಮುಖಾಂತರ ಜಲ್ಲಿ ಮಿಶ್ರಿತ ಮಣ್ಣುಗಳನ್ನು ಹಾಕಿ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯಿತು.
ಉಪ್ಪಿನಂಗಡಿಯಿಂದ ಕಲ್ಲೇರಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಖಾಸಗಿ ಬಸ್ ನೌಕರರ ಸಂಘದ ಪದಾಧಿಕಾರಿಗಳು ಜೆಸಿಬಿ ಮುಖಾಂತರ ಜಲ್ಲಿ ಮಿಶ್ರಿತ ಮಣ್ಣುಗಳಿಂದ ಹೊಂಡವನ್ನು ಮುಚ್ಚುವ ಕಾರ್ಯವನ್ನು ನಡೆಸಿದರು.
ಈ ಸಂದರ್ಭದಲ್ಲಿ ಖಾಸಗಿ ಬಸ್ ನೌಕರರ ಸಂಘದ ಅಧ್ಯಕ್ಷರಾದ ಸಿದ್ದಿಕ್ ಕೆಂಪಿ, ಇಲ್ಯಾಸ್ ಕರಾಯ, ನಾರಾಯಣಗೌಡ, ಚಾಬಕ್ಕ, ಗಣೇಶ್ ಅಳಿಕೆ, ಕೆ.ಅಬ್ದುಲ್ಲ, ಶಬೀರ್, ಸಾಧಿಕ್, ಜಯರಾಮ್ ಆಚಾರ್ಯ, ಜಗದೀಶ್, ಎಂ.ಕೆ.ಮಠ, ದಿನೇಶ್, ರಾಜೇಶ್, ಚಂದ್ರಹಾಸ್ ಶೆಟ್ಟಿ, ಬಾಬು, ಸತೀಶ್ ಕಾಮತ್, ಫಾರೂಕು, ಮನ್ಸೂರ್ ಉಪಸ್ಥಿತರಿದ್ದರು.