×
Ad

ರೈಲು ಸಂಚಾರದಲ್ಲಿ ವ್ಯತ್ಯಯ

Update: 2023-11-12 20:03 IST

ಸಾಂದರ್ಭಿಕ ಚಿತ್ರ

ಮಂಗಳೂರು : ಮಡಗಾಂವ್ - ಕುಮಟಾ ಮತ್ತು ರಾಜಾಪುರ ರಸ್ತೆ - ಸಿಂಧುದುರ್ಗ ವಿಭಾಗಗಳ ನಡುವಿನ ನಿರ್ವಹಣೆಗಾಗಿ ರೈಲು ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಮಡಗಾಂವ್ - ಕುಮಟಾ ವಿಭಾಗದಲ್ಲಿ ನ.16ರಂದು 12:00 ಗಂಟೆಯಿಂದ 3:00 ಗಂಟೆಯವರೆಗೆ ರೈಲು ಸಣಚಾರದಲ್ಲಿ ಅಡಚಣೆ ಉಂಟಾಗಲಿದೆ.

ಮಂಗಳೂರು ಸೆಂಟ್ರಲ್ - ಮಡಗಾಂವ್ ಜಂಕ್ಷನ್ (ನಂ. 06602) ನಿಂದ ನ.16ರಂದು ಪ್ರಾರಂಭವಾಗುವ ವಿಶೇಷ ಪ್ರಯಾಣವು ಕುಮಟಾ ನಿಲ್ದಾಣದಲ್ಲಿ ಅಲ್ಪಾವಧಿಗೆ ಕೊನೆಗೊಳ್ಳುತ್ತದೆ ಮತ್ತು ಕುಮಟಾ - ಮಡಗಾಂವ್ ವಿಭಾಗದ ನಡುವೆ ಭಾಗಶಃ ರದ್ದುಗೊಳ್ಳಲಿದೆ.

ಮಡಗಾಂವ್ ಜಂಕ್ಷನ್ - ಮಂಗಳೂರು ಸೆಂಟ್ರಲ್ ವಿಶೇಷ ರೈಲು (ನ. 06601 ) ನ.16 ರಂದು ಕುಮಟಾ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಮಡಗಾಂವ್ - ಕುಮಟಾ ವಿಭಾಗದ ನಡುವಿನ ಸಂಚಾರ ಭಾಗಶಃ ರದ್ದುಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News