×
Ad

ವಿಟ್ಲ: ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ; ಮತ್ತೋರ್ವ ಸಂಘಪರಿವಾರದ ಕಾರ್ಯಕರ್ತ ಸೆರೆ

Update: 2023-07-31 18:54 IST

ವಿಟ್ಲ: ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಸಂಘಪರಿವಾರದ ಕಾರ್ಯಕರ್ತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಪೆರುವಾಯಿ ನಿವಾಸಿ ಜಯಪ್ರಕಾಶ್ (38) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಪೆರುವಾಯಿಯ ರಾಜ ಎಂಬಾತ ಇನ್ನೋರ್ವ ಆರೋಪಿಯಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೊಂದ ಬಾಲಕಿ ಐದು ಮಂದಿಯ ಹೆಸರನ್ನು ಹೇಳಿದ್ದು, ಮೂರು ಮಂದಿಯನ್ನು ರವಿವಾರ ಬಂಧಿಸಿದ್ದು, ಓರ್ವನನ್ನು ಸೋಮವಾರ ಬಂಧಿಸಲಾಗಿದೆ. ಒಟ್ಟು ನಾಲ್ಕು ಮಂದಿಯನ್ನು ಪೊಲೀಸ್ ಇಲಾಖೆ ಬಂಧಿಸಿದೆ. ಎಲ್ಲರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News