ವಿಟ್ಲ | ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಎ.ಕೆ ಕುಕ್ಕಿಲಗೆ ಸನ್ಮಾನ
ವಿಟ್ಲ: ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಅಬ್ದುಲ್ ಖಾದರ್ ಕುಕ್ಕಿಲ-ಎ.ಕೆ ಕುಕ್ಕಿಲ ಅವರಿಗೆ ಕೋಡಪದವು ಸೌಹಾರ್ದ ಫ್ರೆಂಡ್ಸ್ ವತಿಯಿಂದ ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಯಿತು.
ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಡಿ.ಕೆ.ಇಬ್ರಾಹಿಂ ಅವರು ಮಾತನಾಡಿ, ಕಳೆದ ಎರಡು ದಶಕಗಳಿಂದ ಮಂಗಳೂರಿನ ಸುದ್ದಿ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಅಬ್ದುಲ್ ಖಾದರ್ ಕುಕ್ಕಿಲ ಅವರು ಸಕ್ರಿಯರಾಗಿದ್ದಾರೆ. ಕೇವಲ ಪತ್ರಕರ್ತರಷ್ಟೇ ಅಲ್ಲದೆ, ಲೇಖಕ, ಚಿಂತಕ ಹಾಗೂ ಸಮಾಜಮುಖಿ ಚಟುವಟಿಕೆಗಳ ಪ್ರೇರಕರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ ಎಂದು ಹೇಳಿದರು.
ಸೌಹಾರ್ದ ಫ್ರೆಂಡ್ಸ್ ಕೋಡಪದವು, ಎಸ್.ವೈ.ಎಫ್ ಕುಕ್ಕಿಲ ಹಾಗೂ ಎಂ ಕೆ ಫ್ಯಾಮಿಲಿ ವತಿಯಿಂದ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಈ ವೇಳೆ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಡಿ.ಕೆ.ಇಬ್ರಾಹಿಂ, ರಹ್ಮಾನಿಯ ಜುಮಾ ಮಸ್ಜಿದ್ ಕೋಡಪದವು ಪ್ರಧಾನ ಕಾರ್ಯದರ್ಶಿ ರಹೀಮ್ ಕೋಡಪದವು, ಎಸ್ ಡಿ ಎಂ ಸಿ ಕೋಡಪದವು ಶಾಲೆಯ ಅಧ್ಯಕ್ಷರಾದ ಉಮರ್ ಫಾರೂಕ್ ಟೆಕ್ನಿಕ್, ಎಸ್ ವೈ ಎಸ್ ಮುಖಂಡರಾದ ಮುಹಮ್ಮದ್ ಬೀಡಿ, ಬಿಗ್ ಬ್ಲಾಸ್ಟರ್ ಕೋಡಪದವು ಮಾಜಿ ಅಧ್ಯಕ್ಷರಾದ ಕಬೀರ್ ತಾಳಿತ್ತನೂಜಿ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಹರ್ಷದ್ ಕುಕ್ಕಿಲ, ಝಿಯಾದ್ ಕಂಪದಬೈಲು, ಯಾಸಿರ್ ಕುಕ್ಕಿಲ, ಫಾರೂಕ್ ಬೊನ್ಯಕುಕ್ಕು, ಹಂಝ ತಾಳಿತ್ತನೂಜಿ, ಇಮ್ರಾನ್ ಬೊನ್ಯಕುಕ್ಕು, ಹನೀಫ್ ಕಂಪದಬೈಲು, ಸಿದ್ದೀಕ್ ಸರಾವು, ಎ.ಕೆ ಕುಕ್ಕಿಲ ಅವರ ಕುಟುಂಬಸ್ಥರು ಭಾಗವಹಿಸಿದ್ದರು.
ಸಿರಾಜ್ ಮದಕ ಸ್ವಾಗತಿಸಿ, ವಂದಿಸಿದರು.