×
Ad

ವಿಟ್ಲ: ನಾರಾಯಣ ಸ್ವಾಮಿ ನಿಧನ

Update: 2023-07-17 23:11 IST

ವಿಟ್ಲ: ವಿಟ್ಲ ನಿವಾಸಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಧ್ಯಕ್ಷ ನಾರಾಯಣ ಯಾನೆ ಬಟ್ಟು ಸ್ವಾಮಿ(81) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಜು.17ರಂದು ನಿಧನರಾಗಿದೆ.

ವಿಟ್ಲ ಪ. ಪಂ. ಮಾಜಿ ಅಧ್ಯಕ್ಷ ಅರುಣ ವಿಟ್ಲ ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ.

ನೂರಾರು ಭಕ್ತರನ್ನು ಜತೆಗೂಡಿಕೊಂಡು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದರು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಧ್ಯಕ್ಷರಾಗಿದ್ದ ಬಟ್ಟು ಸ್ವಾಮಿ ಅವರು ದೇಗುಲದಲ್ಲಿ ಪ್ರತಿ ಸಂಕ್ರಮಣಕ್ಕೆ ವಿಶೇಷ ಪೂಜೆ, ಅನ್ನಸಂತರ್ಪಣೆ, 2023ರಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಸಂಪನ್ನಗೊಳಿಸಲು ನೇತೃತ್ವ ವಹಿಸಿದ್ದರು.

ಪುಣಚ ಗ್ರಾಮದ ಮಣಿಲದಿಂದ ವಿಟ್ಲಕ್ಕೆ ಆಗಮಿಸಿ, ವಿಟ್ಲದಲ್ಲಿ ನೆಲೆಸಿ, ರಿಕ್ಷಾ ಚಾಲಕರಾಗಿ ದುಡಿಯುತ್ತ, ಕಳೆದ 53 ವರ್ಷಗಳಿಂದ ವರ್ಷಕ್ಕೆ 10 ಬಾರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿ ಅವರು ವಿಶೇಷ ದಾಖಲೆ ನಿರ್ಮಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News