×
Ad

ವಿಟ್ಲ | ಮಹಿಳೆಗೆ ಲಕ್ಷಾಂತರ ರೂ. ವಂಚನೆ : ಪ್ರಕರಣ ದಾಖಲು

Update: 2025-11-28 23:45 IST

ವಿಟ್ಲ, ನ.28: ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳಿಬ್ಬರು ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.

ಇಡ್ಕಿದು ಗ್ರಾಮದ ಉರಿಮಜಲು ನಿವಾಸಿ ಮಹಿಳೆ, ವಿಟ್ಲಕಸಬಾ ಗ್ರಾಮದ ಫಾತಿಮ ಬಿಲ್ಡಿಂಗ್‌ನಲ್ಲಿರುವ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ತೆರಳಿ 6,000 ರೂ. ಡ್ರಾ ಮಾಡಿ ಹೊರಗಡೆ ಬರುತ್ತಿದ್ದ ಸಂದರ್ಭ, ಎಟಿಎಂ ಕೇಂದ್ರದ ಒಳಗಡೆಯಿದ್ದ ಅಪರಿಚಿತ ವ್ಯಕ್ತಿಗಳು ಮಹಿಳೆಯನ್ನು ಕರೆದು ಎಟಿಎಂ ಅನ್ನು ಸರಿಯಾಗಿ ಮುಚ್ಚಬೇಕೆಂದು ತಿಳಿಸಿದ್ದರೆನ್ನಲಾಗಿದೆ.

ಅದರಂತೆ ಮಹಿಳೆ ಕೇಂದ್ರದ ಒಳಗೆ ಹೋಗಿ ನೋಡಿ ಹೊರಗಡೆ ಬರುವಾಗ ಅಪರಿಚಿತ ವ್ಯಕ್ತಿಗಳು ಕಾರ್ಡ್ ಬದಲಾಗಿದೆ ಎಂದು ತಿಳಿಸಿ ಮಹಿಳೆಯ ಕೈಯಲ್ಲಿದ್ದ ಕಾರ್ಡನ್ನು ಅದಲು ಬದಲುಗೊಳಿಸಿದ್ದರು. ಮನೆಗೆ ಬಂದು ರಾತ್ರಿ ಮೊಬೈಲ್ ನೋಡುವಾಗ ಖಾತೆಯಲ್ಲಿದ್ದ ಸುಮಾರು 1.19 ಲಕ್ಷ ರೂ. ವರ್ಗಾವಣೆಯಾಗಿರುವ ಬಗ್ಗೆ ಸಂದೇಶ ಬಂದಿದೆ ಎಂದು ವಂಚನೆಗೊಳಗಾದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News