×
Ad

ವಿಕೆ ಫರ್ನಿಚರ್ ಆ್ಯಂಡ್ ‌ಎಲೆಕ್ಟ್ರಾನಿಕ್: ಸ್ವಾತಂತ್ರ್ಯ ಪ್ರಯುಕ್ತ ನಡೆದ ಡ್ರಾಯಿಂಗ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

Update: 2023-08-27 22:14 IST

ಉಳ್ಳಾಲ: ವ್ಯವಹಾರದ ಜೊತೆ ಸಾಮಾಜಿಕ ವಾಗಿ ಕೆಲವು ಕಾರ್ಯಕ್ರಮ ಗಳನ್ನು, ವಿದ್ಯಾರ್ಥಿಗಳಿಗೆ ಕೆಲವು ಸ್ಪರ್ಧೆ ಗಳನ್ನು ಏರ್ಪಡಿಸುವುದು ಸ್ವಾಗತಾರ್ಹ.ಇದರಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ಬೆಳೆಸಲು ಅವಕಾಶ ಸಿಗುತ್ತದೆ ಎಂದು ಐವನ್ ಡಿಸೋಜ ಹೇಳಿದರು

ಅವರು ವಿಕೆ ಫರ್ನಿಚರ್ ಮತ್ತು ‌ಎಲೆಕ್ಟ್ರಾನಿಕ್ ಇದರ ಆಶ್ರಯದಲ್ಲಿ 76 ನೇ ಸ್ವಾತಂತ್ರ್ಯದ ಪ್ರಯುಕ್ತ ನಡೆದ ಡ್ರಾಯಿಂಗ್ ಸ್ಪರ್ಧೆ ಯಲ್ಲಿ ವಿಜೇತರಿಗೆ ‌ಹಮ್ಮಿಕೊಂಡಿರುವ ಬಹುಮಾನ ವಿತರಣಾ ಸಮಾರಂಭ ದಲ್ಲಿ ಮಾತನಾಡಿದರು.

ವಿಕೆ ಫರ್ನಿಚರ್ ಮಾಲಕ ವಿಠಲ್ ಕುಲಾಲ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಡೈರೆಕ್ಟರ್ ಕೆಟಿ ಸುವರ್ಣ, ಬಿಜೆಪಿ ಮುಖಂಡ ಸತೀಶ್ ಕುಂಪಲ, ದೇರಳಕಟ್ಟೆ ಐಯ್ಯಪ್ಪ ಸ್ವಾಮಿ ದೇವಸ್ಥಾನ ದ ಆಡಳಿತ ಮೊಕ್ತೇಸರ ಚಂದ್ರ ಹಾಸ್ ಅಡ್ಯಂತಾಯ, ಕಲಾವಿದ ,ಕಲಾಶ್ರೀ ಅವಾರ್ಡ್ ಪಡೆದ ಶಬರಿ ವೈಗಾಣಿಗ, ವಿಕೆ. ಫರ್ನಿಚರ್ ಮಾಲಕ ವಿನುತ ವಿಠಲ್ ಕುಲಾಲ್, ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಚಿತ್ರ ಕಲೆ ಆರ್ಟಿಸ್ಟ್ ,ಕಲಾಶ್ರೀ ಅವಾರ್ಡ್ ಪಡೆದಶಬರಿ ವೈ ಗಾಣಿಗ ಅವರನ್ನು ಸನ್ಮಾನಿಸಲಾಯಿತು.

ವಿಕೆ‌ ಫರ್ನಿಚರ್ ನ ಎಂಜಿಎಂ ಸತೀಶ್ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News