×
Ad

ವಿಟ್ಲ: ಹೊರೈಝನ್ ಶಾಲೆಯಲ್ಲಿ ವಾಲಿಬಾಲ್ ಪಂದ್ಯಾಟ

Update: 2023-08-16 12:51 IST

ವಿಟ್ಲ: ದ.ಕ.ಜಿಲ್ಲಾ ಪಂಚಾಯತ್ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬಂಟ್ವಾಳ ಇದರ ವತಿಯಿಂದ ವಿಟ್ಲ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟ ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಿತು.

ಶಾಲೆಯ ಅಧ್ಯಕ ಝುಬೈರ್ ಮಾಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ವಿಟ್ಲ ವಲಯದ ಕ್ರೀಡಾ ನೋಡಲ್ ಅಧಿಕಾರಿ ರಾಜೇಂದ್ರ, ಮಾಣಿಲದ ದೈಹಿಕ ಶಿಕ್ಷಕ ಉಮಾನಾಥ ರೈ, ಕನ್ಯಾನದ ಸಿ.ಆರ್.ಪಿ‌. ಚಂದ್ರಶೇಖರ, ಶಾಲೆಯ ಕಾರ್ಯದರ್ಶಿ ನೋಟರಿ ಅಬೂಬಕರ್,ಸಂಚಾಲಕ ಮಹಮ್ಮದ್ ಇಕ್ಬಾಲ್ ಹಾನೆಸ್ಟ್,ಲೆಕ್ಕ ಪರಿಶೋಧಕ ಇಕ್ಬಾಲ್ ಮೇಗಿನಪೇಟೆ, ಮೇಲ್ವಿಚಾರಕ ಗಫೂರ್ ಪೊನ್ನೋಟು, ಮಸೀದಿ ಕಾರ್ಯದರ್ಶಿ ಹಮೀದ್ ಬದ್ರಿಯಾ ,ಅಬೂಬಕರ್ ಅನಿಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಸ್ವಾಗತಿಸಿ ,ಹರಿಣಾಕ್ಷಿ ವಂದಿಸಿದರು. ಉಪ ಮುಖ್ಯ ಶಿಕ್ಷಕಿ ಗಾಯತ್ರಿ ನಿರೂಪಿಸಿದರು.

ಆಸುಪಾಸಿನ‌ ಸುಮಾರು ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು‌ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News