ನ.5 ರಂದು ವಕ್ಫ್ ಉಮೀದ್ ಪೋರ್ಟಲ್ ಮಾಹಿತಿ ಕಾರ್ಯಾಗಾರ
Update: 2025-11-03 19:00 IST
ಮಂಗಳೂರು : ಕೇಂದ್ರ ಸರ್ಕಾರದ ಆದೇಶದಂತೆ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಉಮೀದ್ ಪೋರ್ಟಲ್ ರಚನೆಯಾಗಿದ್ದು, ಈ ಪೋರ್ಟಲ್‌ನಲ್ಲಿ ದಾಖಲೆಗಳನ್ನು ನೋಂದಣಿ ಮಾಡುವ ಬಗ್ಗೆ ಮಾಹಿತಿ ಕಾರ್ಯಾಗಾರ ನ.5 ರಂದುಬೆಳಿಗ್ಗೆ 10 ಗಂಟೆಗೆ ನಗರದ ಪುರಭವನ ಸಂಕೀರ್ಣದ ಮಿನಿ ಟೌನ್‌ಹಾಲ್‌ನಲ್ಲಿ ಆಯೋಜಿಸಲಾಗಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ವಕ್ಫ್ ಮಂಡಳಿ ಸ್ಥಾಯಿ ಸಮಿತಿ ಚೇರ್‌ಮೆನ್ ಅನ್ವರ್ ಪಾಷಾ, ಮಾಜಿ ಅಧ್ಯಕ್ಷರಾದ ಖಾಲಿದ್ ಹಾಗೂ ರಿಯಾಝ್ ಖಾನ್ ಭಾಗವಹಿಸಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಯವರು (ಮಸ್ಜಿದ್, ಮದರಸ, ಖಬರ್ ಸ್ಥಾನ, ದರ್ಗಾ ಇತ್ಯಾದಿ ಸಂಸ್ಥೆಗಳ ಪದಾಧಿಕಾರಿಗಳು) ಭಾಗವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಬಿ.ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.