ನಾವು ಹಲವರ ಮನೆ- ಮನಗಳನ್ನು ಬೆಳಗುವ ಹಣತೆಯಾಗಬೇಕಾಗಿದೆ :ರಾಬರ್ಟ್ ಡಿ ಸೋಜ
ಮಂಗಳೂರು, ನ.10:‘‘ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದಕಡೆಗೆ ಸಾಗಿಸುವುದೇ ದೀಪಾವಳಿ. ಒಂದು ದೀಪವು ಅನೇಕ ದೀಪಗಳನ್ನು ಬೆಳಗುವಂತೆ ನಾವು ಇತರರ ಬಾಳಿಗೆ ಬೆಳಕಾಗಿ ಬೆಳಗಬೇಕು. ಜ್ಞಾನದಿಂದ ವ್ಯಕ್ತಿಯ ಜ್ಞಾನವು ವೃದ್ಧಿಯಾಗುತ್ತದೆ. ನಾವು ಹಲವರ ಮನೆ- ಮನಗಳನ್ನು ಬೆಳಗುವ ಹಣತೆಯಾಗಬೇಕು’’ ಎಂದು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ವ. ರೋಬರ್ಟ್ ಡಿ’ಸೋಜ ಸಂದೇಶವನ್ನು ನೀಡಿದರು.
ಅವರು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ‘ದೀಪಾವಳಿ’ ಸ0ಭ್ರಮ -2023ನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ವೇದಿಯಲ್ಲಿ ಉಪಪ್ರಾಂಶುಪಾಲೆಯರಾದ ಬೆಲಿಟಾ ಮಸ್ಕರೇನ್ಹಸ್ ಮತ್ತು ಅನಿತಾ ಥೋಮಸ್‌ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ದೀಪಾವಳಿಯ ಸಾಮೂಹಿಕ ಗೀತೆ ಹಾಡಿ, ‘ಹಸಿರು ಪಟಾಕಿಗಳ ಮೂಲಕ ಸುಂದರ ಪರಿಸರ ನಮ್ಮ ಹೊಣೆ’ ಎಂಬ ಕಿರುಪ್ರಹಸನವನ್ನು ಪ್ರಸ್ತುತ ಪಡಿಸಿದರು. ದೀಪಾವಳಿ ಹಬ್ಬದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿನಿ ಸಾನ್ವಿ ವಿವರಿಸಿದರು.
ಶಾರ್ವಿ ಶೆಟ್ಟಿ ಮತ್ತು ಶ್ರೇಯಾ ಹೆಗ್ಡೆ ಕಾರ‌್ಯಕ್ರಮ ನಿರೂಪಿಸಿದರು. ದೀಪಾವಳಿ ಹಬ್ಬದ ಅಂಗವಾಗಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸೂಚನಾ ಫಲಕವನ್ನು ಸುಂದರವಾಗಿ ಅಲಂಕರಿಸಿದರು.ಶಾಲಾ ಆವರಣವನ್ನುಗೂಡುದೀಪ ಹಾಗೂ ರಂಗೋಲಿಯಮೂಲಕ ಶಂಗರಿಸಲಾಯಿತು.
ಶಿಕ್ಷಕಿ ವನಿತಾ ಪಟೋಲೆ ಕಾರ‌್ಯಕ್ರಮ ಸಂಯೋಜಿದ್ದರು.ಹರ್ಷಿತಾ ಶೆಟ್ಟಿ, ಸೌಮ್ಯಕೆ., ಸುನೀತಾ ಮತ್ತು ರೋಶನ್ ಕೊರ್ಡೊರಿಯೊ ಸಹಕರಿಸಿದರು.