×
Ad

ಯೆನೆಪೋಯ ವಿಶ್ವವಿದ್ಯಾಲಯ ವತಿಯಿಂದ "ಕನ್ನಡ ಕಾವ್ಯ ಕಮ್ಮಟ" ಕಾರ್ಯಾಗಾರ

Update: 2023-09-26 22:44 IST

ಮಂಗಳೂರು: ಯೆನೆಪೋಯ ಇನ್ಟಿಟ್ಯೂಟ್ ಆಫ್ ಆರ್ಟ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ವಿಶ್ವವಿದ್ಯಾಲ ಯದ ಭಾಷಾ ಅಧ್ಯಯನ ವಿಭಾಗ ಮತ್ತು ಸಾಹಿತ್ಯ ಕ್ಲಬ್ ನ ವತಿಯಿಂದ ಕನ್ನಡ ಕಾವ್ಯ ಕುರಿತ ಕಾರ್ಯಾಗಾರ "ಕನ್ನಡ ಕಾವ್ಯ ಕಮ್ಮಟ" ವು ಮಂಗಳವಾರ ಯೆನಪೊಯದ ಕೂಳೂರು ಕ್ಯಾಂಪಸ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಅಮ್ಮೈ ಮಹಾಲಿಂಗ ನಾಯ್ಕ್, ಎಲ್ಲರೂ ನೀರಿನ ಬಗ್ಗೆ ಜಾಗೃತರಾಗಬೇಕು. ಮಳೆಯ ನೀರು ಯಾವುದೇ ಪ್ರಯೋಜನವಾಗದೆ ಸಮುದ್ರ ಸೇರುವ ಬದಲು ಮನೆ, ಜಮೀನುಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಾಣ ಮಾಡಿ ನೀರನ್ನು ಶೇಖರಿಸಿದರೆ, ಅದು ತಮ್ಮ ಜೊತೆಗೆ ಇತರರಿಗೂ ಉಪಯೋಗಕ್ಕೆ ಬರುತ್ತದೆ. ನೀರು ಮತ್ತು ಪರಿಸರ ಉಳಿದರೆ ಮಾತ್ರ ಮುನುಷ್ಯರು ಉಳಿಯಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ನಾನು ಒಂದು ಕಾಲದಲ್ಲಿ ನೀರಿಗಾಗಿ ಪರದಾಡುತ್ತಿದ್ದ ವೇಳೆ ನನ್ನ ಪ್ರಯತ್ನಗಳನ್ನು ಜನರು ತಮಾಷೆ ಮಡುತ್ತಿದ್ದರು. ಆದರೆ, ಯಾವುದೇ ತಮಾಷೆ, ಕುಹುಕಗಳಿಗೆ ಕುಗ್ಗದೆ, ನನ್ನ ಗುರಿ ಸಾಧನೆಯ ಕಡೆ ಗಮನ ಹರಿಸಿದ ಫಲವಾಗಿ ನನಗೆ ನೀರೂ ಸಿಕ್ಕಿತು, ಜೊತೆಗೆ ಪದ್ಮಶ್ರೀ ಪುರಸ್ಕಾರವೂ ಒಲಿಯಿತು ಎಂದು ವಿದ್ಯಾರ್ಥಿಗಳಿಗೆ ತನ್ನ ಸಾಧನೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲ ಮತ್ತು ವಿಜ್ಞಾನ ವಿಭಾಗದ ಡೀನ್‌ ಡಾ. ಅರುಣ್‌ ಎ. ಭಾಗವತ್‌, ಮನುಷತ್ವ, ಸ್ಪಷ್ಟ ಗುರಿ ಇರುವ ವ್ಯಕ್ತಿ ವಿದ್ಯಾಭ್ಯಾಸದ ಹೊರತಾಗಿಯೂ ಸಾಧನೆಗಳನ್ನು ಮಾಡಬಹುದು, ಜೊತೆಗೆ ಆತನ ಸಾಧನೆಯ ಮೂಲಕ ಸಾವಿರಾರು ಮಂದಿಗೆ ವಿದ್ಯಾಭ್ಯಾಸವನ್ನೂ ನೀಡಬಹುದು ಎಂಬುದಕ್ಕೆ ಪದ್ಮಶ್ರೀ ಪುರಸ್ಕೃತ ಅಮ್ಮೈ ಮಹಾಲಿಂಗ ನಾಯ್ಕ್ ಅವರೇ ಪ್ರತ್ಯಕ್ಷ ಸಾಕ್ಷಿ ಎಂದರು.

ಮಾತೃಭಾಷೆಯಲ್ಲಿ ಸಿಗುವ ಸಂತೋಷ, ನೆಮ್ಮದಿ ಬೇರೆಯಾವುದೇ ಭಾಷೆಯಲ್ಲೂ ಸಿಗಲು ಸಾಧ್ಯವಿಲ್ಲ. ಮಾತೃಭಾಷೆ ಯಿಂದ ಮಾತ್ರ ನಮ್ಮ ಧಾರ್ಮಿಕತೆ, ಸಂಸ್ಕೃತಿಯನ್ನು ಉಳಿಸಲು ಸಾಧ್ಯ. ನಿರಂತರ ಪ್ರಯತ್ನ, ನಿಖರಗುರಿ, ವಿನಮ್ರತೆ ಹಾಗೂ ಪ್ರಕೃತಿಯೊಂದಿಗಿನ ನಿಮ್ಮ ಒಡನಾಟ ಉತ್ತಮವಾಗಿದ್ದರೆ ಯಾವುದೇ ರೀತಿಯ ಸಾಧನೆಯೂ ಸಾಧ್ಯ ಎಂದು ಅವರು ನುಡಿದರು.

ಉಪಪ್ರಾಂಶುಪಾಲರಾದ ಜೀವನ್‌ ರಾಜ್‌ ಅವರು ಮಾತನಾಡಿ, ಸಾಧನೆಗೆ ಯಾವುದೇ ಡಿಗ್ರಿಬೇಕಾಗಿಲ್ಲ. ಆಸಕ್ತ, ಗುರಿ ಮುಖ್ಯ. ತಂತ್ರಜ್ಞಾನದ ಯುಗದಲ್ಲಿ ಮನುಷ್ಯತ್ವ ಮರೆಯುತ್ತಿದ್ದಾರೆ. ಪದ್ಮಶ್ರೀ ಪುರಸ್ಕೃತ ಅಮ್ಮೈ ಮಹಾಲಿಂಗ ನಾಯ್ಕ್, ಹರೇಕಳ ಹಾಜಬ್ಬರಂತಹಾ ಸಾಧಕರ ಸಾಧನೆಗಳು ಇಂದಿನ ಯುವ ಪೀಳಿಗೆಗೆ ಮಾದರಿ ಎಂದ ಅವರು, ಛಲ ಮನುಷ್ಯನಿಗೆ ಯಶಸ್ಸನ್ನು ನೀಡುತ್ತದೆ ಎಂದು ನುಡಿದರು.

ಇದೇ ಸಂದರ್ಭ ಪದ್ಮಶ್ರೀ ಪುರಸ್ಕೃತ ಅಮ್ಮೈ ಮಹಾಲಿಂಗ ನಾಯ್ಕ್ ಅವರನ್ನು ಯೆನಪೊಯ ಇನ್ಟಿಟ್ಯೂಟ್ ಆಫ್ ಆರ್ಟ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ವಿಶ್ವವಿದ್ಯಾಲಯದ ಭಾಷಾ ಅಧ್ಯಯನ ವಿಭಾಗ ಮತ್ತು ಸಾಹಿತ್ಯ ಕ್ಲಬ್ ನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮಂಗಳೂರು ಬೆಸೆಂಟ್‌ ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾನ ನೀಡಿದರು. ಉಪ ಪ್ರಾಂಶುಪಾಲೆ ಮತ್ತು ವಾಣಿಜ್ಯ ಮತ್ತು ನಿರ್ವಹಣೆ ವಿಭಾದ ಡಾ. ಶರೀನ ಪಿ., ಉಪಪ್ರಾಂಶುಪಾಳರಾದ ನಾರಾಯಣ ಸುಕುಮಾಋ ಎ., ಭಾಷಾ ವಿಭಾದ ಮುಖ್ಯಸ್ಥೆ ಶಾಲಿನಿ ಸಿಕ್ವೇರ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ದಿನಕರ ಪಿ. ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಪ್ರಾಧಾಪಕ ನಿಯಾಝ್‌ ಪಿ. ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News