ಯೆನೆಪೋಯ ವಿವಿ :ನಾಗರಿಕ ಸೇವಾ ಪರೀಕ್ಷೆಯ ಉಚಿತ ತರಬೇತಿ
ಮಂಗಳೂರು, ಆ.3: ಯೆನೆಪೋಯ ವಿವಿ ಆಶ್ರಯದಲ್ಲಿ ನಾಗರಿಕ ಸೇವಾ ಪರೀಕ್ಷೆಯ ಉಚಿತ ತರಬೇತಿ ಕಾರ್ಯಕ್ರಮದ ಸಮಾರೋಪ ಗುರುವಾರ ನಡೆಯಿತು.
ಈ ತರಬೇತಿ ಕಾರ್ಯಕ್ರಮದಿಂದ ಕರ್ನಾಟಕದ ನೂರಾರು ಆಕಾಂಕ್ಷಿಗಳು ಪ್ರಯೋಜನ ಪಡೆದಿದ್ದಾರೆ. ಯೆನೆಪೋಯ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಅರುಣ್ ಎ ಭಾಗವತ್ ಅಧ್ಯಕ್ಷತೆ ವಹಿಸಿದ್ದರು.
ಯೆನೆಪೋಯ ವಿವಿ ನಾಗರಿಕ ಸೇವೆಗಳ ಪರೀಕ್ಷೆ ತರಬೇತಿ ಸಂಯೋಜಕರಾದ ಮೊಹಮ್ಮದ್ ಅಲಿ ರೂಮಿ ಅವರು ಭವಿಷ್ಯ ದಲ್ಲಿ ಸಾವಿರಾರು ನಾಗರಿಕ ಸೇವಾ ಆಕಾಂಕ್ಷಿಗಳಿಗೆ ತರಬೇತಿ ನೀಡಲು ಸಂಸ್ಥೆ ಬದ್ಧವಾಗಿದೆ ಮತ್ತು ಭಾರತದಲ್ಲಿ ಪ್ರತಿಷ್ಠಿತ ನಾಗರಿಕ ಸೇವೆಗಳ ಪರೀಕ್ಷೆಯನ್ನು ಭೇದಿಸುವ ತಂತ್ರಗಳ ಬಗ್ಗೆ ವಿವರಿಸಿದರು
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ನೋಂದಾಯಿತರಿಗೆ ಇ-ಪ್ರಮಾಣಪತ್ರವನ್ನು ನೀಡಲಾಯಿತು.
ಉಪ ಪ್ರಾಂಶುಪಾಲ ಡಾ.ಶರೀನಾ ಪಿ, ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಎಚ್‌ಒಡಿ ಡಾ. ಸಕೀನಾ ನಾಸರ್, ಅಸೋಸಿಯೆಟ್ ಪ್ರೊಫೆಸರ್ ಡಾ. ಚಂದ್ರ ಶೇಖರ್ ಕುಮಾರ್, ಉಪನ್ಯಾಸಕರಾದ ಮೋಹಿತ್.ಎಸ್ ಯಾದವ್, ಆಯೆಷಾ ದಿಲ್ಶಾದ್ ಮತ್ತಿತರರು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿಧಿ ವಿಜ್ಞಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಅಕ್ಷ್ಯಾ ಪಿ ಕಾರ್ಯಕ್ರಮ ನಿರೂಪಿಸಿದರು.