ಡ್ರಗ್ಸ್ ಸೇವನೆ ಆರೋಪ: ಯುವಕ ಸೆರೆ
Update: 2025-08-13 20:46 IST
ಮಂಗಳೂರು, ಆ.13: ಡ್ರಗ್ಸ್ ಸೇವನೆ ಮಾಡಿದ್ದ ಆರೋಪದಲ್ಲಿ ಯುವಕನನ್ನು ಉರ್ವ ಪೊಲೀಸರು ಕೋಡಿಕಲ್ ಕಟ್ಟೆಯ ಬಳಿ ಮಂಗಳವಾರ ಬಂಧಿಸಿದ್ದಾರೆ.
ಕೋಡಿಕಲ್‌ನ ಧನುಷ್ ಕುಮಾರ್ (23) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಕೋಡಿಕಲ್ ಕಟ್ಟೆಯ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಸಿಗರೇಟ್ ಸೇದುತ್ತಾ ನಿಂತಿದ್ದ. ಸಂಶಯಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸಿಗರೇಟಿನೊಳಗೆ ಡ್ರಗ್ಸ್ ತುಂಬಿಸಿ ಸೇದಿರುವುದನ್ನು ಒಪ್ಪಿಕೊಂಡಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದು ಉರ್ವ ಠಾಣೆಯ ಎಸ್ಸೈ ಗುರುವಪ್ಪ ಕಂಠಿ ತಿಳಿಸಿದ್ದಾರೆ.