×
Ad

ಬೆಂಗಳೂರಿನಲ್ಲಿ ಉಪ್ಪಿನಂಗಡಿಯ ಯುವಕ ನಿಧನ

Update: 2023-10-14 12:13 IST

ಉಪ್ಪಿನಂಗಡಿ: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಉಪ್ಪಿನಂಗಡಿಯ ಮಠದ ಯುವಕನೋರ್ವ ದಿಢೀರ್ ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ.

ಇಲ್ಲಿನ ಮಠ- ಹಿರ್ತಡ್ಕ ನಿವಾಸಿ ಹಂಝ ಎಂಬವರ ಪುತ್ರ ಅಜ್ಜದ್ (18) ಮೃತ ಯುವಕ. ಬೆಂಗಳೂರಿನಲ್ಲಿ ಸೂಪರ್ ಮಾರ್ಕೆಟ್‍ವೊಂದರಲ್ಲಿ ಕೆಲಸಕ್ಕಿದ್ದ ಈತನಿಗೆ ಎರಡು ದಿನಗಳ ಹಿಂದೆ ದಿಢೀರ್ ಅನಾರೋಗ್ಯ ಕಾಡಿದ್ದು, ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈತ ಅ.13ರಂದು ಮೃತಪಟ್ಟಿದ್ದಾನೆ. ಮೃತನ ಮೃತದೇಹವನ್ನು ಅ.14ರಂದು ಮಠ ಮಸೀದಿಗೆ ತಂದು ದಫನ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News