×
Ad

ಮೂರು ವರ್ಷದಲ್ಲಿ 12 ಸಾವಿರ ವಂಚನೆ ಪ್ರಕರಣ: ಕೇಂದ್ರ ಸರ್ಕಾರ

Update: 2023-12-20 08:21 IST

Photo: freepik

ಹೊಸದಿಲ್ಲಿ: ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ ಕಾರ್ಡ್/ಇಂಟರ್ನೆಟ್/ಎಟಿಎಂ/ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳ ವರ್ಗದಲ್ಲಿ ಸುಮಾರು 461 ಕೋಟಿ ರೂಪಾಯಿ ಮೌಲ್ಯದ 12 ಸಾವಿರ ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಂಗಳವಾರ ಮಾಹಿತಿ ನೀಡಿದೆ.

ದೂರಸಂಪರ್ಕ ಇಲಾಖೆ ವತಿಯಿಂದ ಪಡೆದ ಅಂಕಿ ಅಂಶಗಳ ಪ್ರಕಾರ, ಈ ವರ್ಷದ ಡಿಸೆಂಬರ್ 14ರವರೆಗೆ ಸೈಬರ್ ವಂಚನೆ ವರದಿ ಮತ್ತು ನಿರ್ವಹಣೆ ವ್ಯವಸ್ಥೆ ಮಾಡ್ಯೂಲ್ ಮೂಲಕ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ವಂಚನೆ ಪ್ರಕರಣಗಳನ್ನು ತಡೆದು 1000 ಕೋಟಿ ರೂಪಾಯಿಗಳನ್ನು ಉಳಿಸಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಭಗವತ್ ಕರಾಡ್ ತಿಳಿಸಿದರು.

ಸೈಬರ್ ಅಪರಾಧ ಮತ್ತು ಹಣಕಾಸು ವಂಚನೆಗಳಿಗೆ ಬಳಸಲಾದ ಮೊಬೈಲ್ಗಳನ್ನು ಪತ್ತೆ ಮಾಡಿ ನಕಲಿ, ಸುಳ್ಳು ದಾಖಲೆಗಳು, ಶಂಕಿತ ಸಂಪರ್ಕಗಳು ಸೇರಿದಂತೆ 72 ಲಕ್ಷ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಎಂದು ವಿವರ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News