×
Ad

ಯುವಜನರನ್ನು ತೀವ್ರವಾದಕ್ಕೆ ಸೆಳೆಯಲು ಯತ್ನಿಸಿದ ಆರೋಪ: ಉತ್ತರ ಕನ್ನಡದ ವ್ಯಕ್ತಿಗೆ 10 ವರ್ಷ ಜೈಲು

Update: 2026-01-22 20:29 IST

ಸಾಂದರ್ಭಿಕ ಚಿತ್ರ | Photo Credit : freepik

ಹೊಸದಿಲ್ಲಿ,ಜ.22: ಯುಜನರನ್ನು ತೀವ್ರವಾದದೆಡೆಗೆ ಸೆಳೆಯಲು ಹಾಗೂ ಅವರನ್ನು ಪಾಕ್ ಮೂಲದ ಲಷ್ಕರೆ ತಯ್ಯಬಾಗೆ ಸೇರ್ಪಡೆಗೊಳಿಸಲು ಯತ್ನಿಸಿದ್ದ ಆರೋಪಕ್ಕೆ ಸಂಬಂಧಿಸಿ ಪ್ರಕರಣದ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ನಿವಾಸಿಯೊಬ್ಬನಿಗೆ ವಿಶೇಷ ಎನ್‌ಐಎ ನ್ಯಾಯಾಲಯ ಬುಧವಾರ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.

ಸಯ್ಯದ್ ಎಂ. ಇದ್ರಿಸ್ ಶಿಕ್ಷೆ ವಿಧಿಸಲ್ಪಟ್ಟ ಆರೋಪಿಯಾಗಿದ್ದು, ಆತನಿಗೆ ಭಾರತೀಯ ದಂಡಸಂಹಿತೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ಯುಎಪಿಎ) ಕಾಯ್ದೆಯಡಿ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ನ್ಯಾಯಾಲಯವು ಆರೋಪಿಗೆ 70 ಸಾವಿರ ರೂ. ದಂಡವನ್ನು ವಿಧಿಸಿದೆ.

ಈ ಪ್ರಕರಣದ ತನಿಖೆಯು 2020ರ ಎಪ್ರಿಲ್‌ನಲ್ಲಿ ಪಶ್ಚಿಮಬಂಗಾಳ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸಲ್ಪಟ್ಟಿತ್ತು. ತನಿಖೆಯ ಹಂತದಲ್ಲಿ ಎನ್‌ಐಎಯು ಇದ್ರಿಸ್ ಹಾಗೂ ಜಮ್ಮುಕಾಶ್ಮೀರ ನಿವಾಸಿ ಅಲ್ತಾಫ್ ಅಹ್ಮದ್ ರಾಥೆರ್ ಎಂಬವರನ್ನು ಬಂಧಿಸಿತ್ತು.

ಇವರಿಬ್ಬರು , ತಾನಿಯಾ ಪರ್ವೀನ್ ಎಂಬಾಕೆಯ ಜೊತೆ ಸೇರಿಕೊಂಡು, ಪಶ್ಚಿಮಬಂಗಾಳದಲ್ಲಿ ಲಷ್ಕರೆ ತಯ್ಯಬಾದ ಘಟಕವನ್ನು ಸ್ಥಾಪಿಸಲು ಸಂಚು ಹೂಡಿದ್ದರು ಎಂದು ಎನ್‌ಐಎ ಆಪಾದಿಸಿದೆ.

ಇವರ ಬಂಧನಕ್ಕೆ ಮುನ್ನ ಪಶ್ಚಿಮ ಬಂಗಾಳ ಪೊಲೀಸರು ತಮಗೆ ದೊರೆತ ಮಾಹಿತಿಯ ಮೇರೆಗೆ ಉತ್ತರ ಪರಗಣ ಜಿಲ್ಲೆಯ ಬದೂರಿಯಾದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯೊಂದರಲ್ಲಿ ತಾನಿಯಾ ಪರ್ವೀನ್‌ಳನ್ನು ಬಂಧಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಕಾನೂನುಬಾಹಿರ ಸಾಹಿತ್ಯ ಸೇರಿದಂತೆ ಅಕ್ರಮ ಸಾಮಾಗ್ರಿಗಳನ್ನು ಪತ್ತೆಹಚ್ಚಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News