×
Ad

1996ರ ಮಾದಕ ದ್ರವ್ಯ ವಶ ಪ್ರಕರಣ | ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ದೋಷಿ ಎಂದ ನ್ಯಾಯಾಲಯ

Update: 2024-03-27 22:56 IST

ಸಂಜೀವ್ ಭಟ್ | Photo: PTI  

ಪಾಲನ್ಪುರ : 1996ರ ಮಾದಕ ದ್ರವ್ಯ ವಶಪಡಿಸಿಕೊಂಡ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಗುಜರಾತ್ ಬನಸ್ಕಾಂತ ಜಿಲ್ಲೆಯ ಪಾಲನ್ಪುರ ಪಟ್ಟಣದ ಸೆಷನ್ಸ್ ನ್ಯಾಯಾಲಯ ಬುಧವಾರ ದೋಷಿ ಎಂದು ಪರಿಗಣಿಸಿದೆ.

ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಗುರುವಾರ ಅಪರಾಹ್ನ ಪ್ರಕಟಿಸುವ ಸಾಧ್ಯತೆ ಇದೆ.

1996ರಲ್ಲಿ ರಾಜಸ್ಥಾನ ಮೂಲದ ವಕೀಲ ಸುಮೇರ್ ಸಿಂಗ್ ರಾಜಪುರೋಹಿತ್ ಅವರು ನೆಲೆಸಿದ್ದ ಪಾಲನ್ಪುರದಲ್ಲಿರುವ ಹೊಟೇಲ್ ಕೊಠಡಿಯಿಂದ ಪೊಲೀಸರು ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದರು. ಈ ರೀತಿ ಸುಳ್ಳು ಪ್ರತಿಪಾದನೆಯ ಮೂಲಕ ಸಂಜೀವ್ ಭಟ್ ಅವರು ವಕೀಲರನ್ನು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂದು ಸೆಷನ್ಸ್ ನ್ಯಾಯಾಲಯ ಹೇಳಿದೆ.

2015ರಲ್ಲಿ ಐಪಿಎಸ್ ನಿಂದ ವಜಾಗೊಂಡ ಭಟ್ ಆಗ ಬನಸ್ಕಾಂತ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಅವರ ಕೆಳಗಿನ ಜಿಲ್ಲಾ ಪೊಲೀಸರು ಎನ್ಡಿಪಿಎಸ್ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಸುಮೇರ್ ಸಿಂಗ್ ರಾಜಪುರೋಹಿತ್ ಅವರನ್ನು ಬಂಧಿಸಿದ್ದರು. ರಾಜಪುರೋಹಿತ್ ಅವರು ನೆಲೆಸಿದ್ದ ಹೊಟೇಲ್ನ ಕೊಠಡಿಯಿಂದ ಮಾದಕ ದ್ರವನ್ನು ವಶಪಡಿಸಿಕೊಂಡಿದ್ದೇವೆ ಎಂದು ಅವರು ಪ್ರತಿಪಾದಿಸಿದ್ದರು.

ಆದರೆ, ಅನಂತರ ರಾಜಸ್ಥಾನದ ಪಾಲಿಯಲ್ಲಿರುವ ವಿವಾದಾತ್ಮಕ ಸೊತ್ತನ್ನು ವರ್ಗಾವಣೆ ಮಾಡುವ ಕುರಿತಂತೆ ಅವರನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ರಾಜಸ್ಥಾನದ ಪೊಲೀಸರು ಪ್ರತಿಪಾದಿಸಿದ್ದರು.

ಈ ಪ್ರಕರಣದ ಕುರಿತು ಕೂಲಂಕುಷ ತನಿಖೆ ನಡೆಸುವಂತೆ ಆಗ್ರಹಿಸಿ 1999ರಲ್ಲಿ ಮಾಜಿ ಪೊಲೀಸ್ ಇನ್ಸ್ಪೆಕ್ಟರ್ ಐ.ಬಿ. ವ್ಯಾಸ್ ಅವರು ಗುಜರಾತ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News