ಹಲವು ದಿನಗಳ ಏರಿಳಿತದ ನಂತರ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ
ಸಾಂದರ್ಭಿಕ ಚಿತ್ರ (AI)
ಚಿನ್ನದ ಬೆಲೆಗಳು ಮಂಗಳವಾರ ಕುಸಿದಿವೆ. ಸಾರ್ವಕಾಲಿಕ ಗರಿಷ್ಠ ರೂ 1,35,496ರಿಂದ ಹಿಮ್ಮೆಟ್ಟಿ, ರೂ 1,33,674 ರಷ್ಟು ತಲುಪಿದೆ. ಈ ನಡುವೆ ಬೆಳ್ಳಿ ಪ್ರತಿ ಕಿಲೊಗ್ರಾಂಗೆ ರೂ 2,067ರಷ್ಟು, ಅಂದರೆ ಶೇ 1.04ರಷ್ಟು ಕುಸಿದು ಕೆಜಿಗೆ ರೂ. 1,95,834 ರಷ್ಟು ತಲುಪಿದೆ.
ಹಲವು ದಿನಗಳ ನಂತರ ಭಾರತದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದೆ. ಸೋಮವಾರ ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ಬೆಲೆಗಳು ಮಂಗಳವಾರ ಕುಸಿದಿವೆ. ಸಾರ್ವಕಾಲಿಕ ಗರಿಷ್ಠ ರೂ 1,35,496ರಿಂದ ಹಿಮ್ಮೆಟ್ಟಿ, ರೂ 1,33,674 ರಷ್ಟು ತಲುಪಿದೆ.
ಈ ನಡುವೆ ಬೆಳ್ಳಿ ಪ್ರತಿ ಕಿಲೊಗ್ರಾಂಗೆ ರೂ 2,067 ರಷ್ಟು ಅಂದರೆ ಶೇ 1.04ರಷ್ಟು ಕುಸಿದು ಕೆಜಿಗೆ ರೂ. 1,95,834 ರಷ್ಟು ತಲುಪಿದೆ. ಸಾರ್ವಕಾಲಿಕ ಗರಿಷ್ಠ ರೂ. 2,01,615ರಿಂದ ಕುಸಿದು ವಹಿವಾಟು ನಡೆಸುತ್ತಿದೆ.
ಚಿನ್ನದ ಬೆಲೆ ಕುಸಿತ
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು ರೂ 13,386 ಆಗಿದ್ದು, ನಿನ್ನೆ ರೂ 13,538 ಇತ್ತು. ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಒಂದು ಗ್ರಾಂ ಚಿನ್ನದ ಬೆಲೆ ರೂ. 152 ಇಳಿಕೆಯಾಗಿದೆ.
8 ಗ್ರಾಂ ಚಿನ್ನದ ಬೆಲೆ ಇಂದು ರೂ 1,07,088 ಆಗಿದ್ದು, ಸೋಮವಾರ ರೂ 1,08,304 ಇತ್ತು. ಸೋಮವಾರಕ್ಕೆ ಹೋಲಿಸಿದರೆ ಇಂದು ರೂ 1,216 ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ 1,33,860 ಕ್ಕೆ ಕುಸಿದಿದೆ. ಸೋಮವಾರ ರೂ 1,35,380 ಇತ್ತು. ಸೋಮವಾರಕ್ಕೆ ಹೋಲಿಸಿದರೆ ಇಂದು ರೂ 1,520 ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ರೂ 13,38,600 ಆಗಿದ್ದು, ಸೋಮವಾರ ರೂ 13,53,800 ಇತ್ತು. ಇಂದು ಬರೋಬ್ಬರಿ ರೂ 15,200 ಕುಸಿದಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?
ಮಂಗಳವಾರ ಡಿಸೆಂಬರ್ 16ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿದಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ರೂ 13,386 (-152), ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ ರೂ 12,270 (-140) ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನಕ್ಕೆ ರೂ 10,039 (-115) ಬೆಲೆಗೆ ಕುಸಿದಿದೆ.
ಭಾರತದ ವಿವಿಧ ನಗರಗಳಲ್ಲಿ ಒಂದು ಗ್ರಾಂ ಚಿನ್ನದ ಬೆಲೆ
ಚೆನ್ನೈ: 24 ಕ್ಯಾರೆಟ್ ರೂ. 13,473, 22 ಕ್ಯಾರೆಟ್ ರೂ. 12,350, 18 ಕ್ಯಾರೆಟ್ ರೂ. 10,300
ಮುಂಬೈ: 24 ಕ್ಯಾರೆಟ್ ರೂ. 13,386, 22 ಕ್ಯಾರೆಟ್ ರೂ. 12,270, 18 ಕ್ಯಾರೆಟ್ ರೂ. 10,039
ದೆಹಲಿ: 24 ಕ್ಯಾರೆಟ್ ರೂ. 13,386, 22 ಕ್ಯಾರೆಟ್ ರೂ. 12,285, 18 ಕ್ಯಾರೆಟ್ ರೂ. 10,054
ಕೋಲ್ಕತ್ತಾ: 24 ಕ್ಯಾರೆಟ್ ರೂ. 13,386, 22 ಕ್ಯಾರೆಟ್ ರೂ. 12,270, 18 ಕ್ಯಾರೆಟ್ ರೂ. 10,039
ಬೆಂಗಳೂರು: 24 ಕ್ಯಾರೆಟ್ ರೂ. 13,386, 22 ಕ್ಯಾರೆಟ್ ರೂ. 12,270, 18 ಕ್ಯಾರೆಟ್ ರೂ. 10,039
ಹೈದರಾಬಾದ್: 24 ಕ್ಯಾರೆಟ್ ರೂ. 13,386, 22 ಕ್ಯಾರೆಟ್ ರೂ. 12,270, 18 ಕ್ಯಾರೆಟ್ ರೂ. 10,039
ಕೇರಳ: 24 ಕ್ಯಾರೆಟ್ ರೂ. 13,386, 22 ಕ್ಯಾರೆಟ್ ರೂ. 12,270, 18 ಕ್ಯಾರೆಟ್ ರೂ. 10,039
ಪುಣೆ: 24 ಕ್ಯಾರೆಟ್ ರೂ. 13,386, 22 ಕ್ಯಾರೆಟ್ ರೂ. 12,270, 18 ಕ್ಯಾರೆಟ್ ರೂ. 10,039
ವಡೋದರಾ: 24 ಕ್ಯಾರೆಟ್ ರೂ. 13,391, 22 ಕ್ಯಾರೆಟ್ ರೂ. 12,275, 18 ಕ್ಯಾರೆಟ್ ರೂ. 10,044
ಅಹಮದಾಬಾದ್: 24 ಕ್ಯಾರೆಟ್ ರೂ. 13,391, 22 ಕ್ಯಾರೆಟ್ ರೂ. 12,275, 18 ಕ್ಯಾರೆಟ್ ರೂ. 10,044
ಇಂದು ಬೆಳ್ಳಿ ಬೆಲೆ ಎಷ್ಟಿದೆ?
ಸೋಮವಾರ ಬೆಳ್ಳಿ ದರ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಆದರೆ ಇಂದು ಮಂಗಳವಾರ ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿ ದರ ಇಂದು ರೂ 199.10 ಆಗಿದ್ದು, ಸೋಮವಾರ ರೂ 203 ಇತ್ತು. ಸೋಮವಾರಕ್ಕೆ ಹೋಲಿಸಿದರೆ ಇಂದು ಒಟ್ಟು ರೂ 3.90 ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ರೂ 1,592.80 ಆಗಿದೆ. ಸೋಮವಾರ ರೂ 1,624 ಇತ್ತು. ಸೋಮವಾರಕ್ಕೆ ಹೋಲಿಸಿದರೆ ಇಂದು ರೂ 31.20 ಕುಸಿದಿದೆ.