×
Ad

ದಿಲ್ಲಿ | ಮೆಸ್ಸಿ ಕಾರ್ಯಕ್ರಮದಲ್ಲಿ 'AQI, AQI' ಘೋಷಣೆ ಕೂಗಿ ಸಿಎಂ ರೇಖಾ ಗುಪ್ತಾ ಅವರನ್ನು ಗುರಿಯಾಗಿಸಿಕೊಂಡ ಜನರು

Update: 2025-12-16 15:09 IST

Photo credit: financialexpress.com

ಹೊಸದಿಲ್ಲಿ: ದಿಲ್ಲಿಯ ಹದಗೆಟ್ಟ ಗಾಳಿ ಗುಣಮಟ್ಟ ಲಿಯೋನೆಲ್ ಮೆಸ್ಸಿ ಅವರ ಕಾರ್ಯಕ್ರಮದ ಮೇಲೆ ಕರಿನೆರಳು ಬೀರಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಜನಸಮೂಹದ ಜಾಗತಿಕ ಫುಟ್ಬಾಲ್ ಐಕಾನ್ ಅನ್ನು ಸ್ವಾಗತಿಸುವಾಗ ರಾಜಕಾರಣಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಗೋಟ್ ಇಂಡಿಯಾ ಪ್ರವಾಸದ ಅಂತಿಮ ಹಂತದಲ್ಲಿ ಮೆಸ್ಸಿಯನ್ನು ಸ್ವಾಗತಿಸಲು ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ವೇದಿಕೆಗೆ ಬಂದಾಗ, ಕೆಲವರು "ಎಕ್ಯೂಐ, ಎಕ್ಯೂಐ" ಎಂದು ಘೋಷಣೆಗಳನ್ನು ಕೂಗಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 498ಕ್ಕೆ ತಲುಪಿದೆ. ಸತತ ಮೂರನೇ ದಿನವೂ ನಗರದ ಗೋಚರತೆ ತೀವ್ರವಾಗಿ ಕುಸಿದಿದೆ. ದಟ್ಟವಾದ ಮಬ್ಬು ಆಕಾಶವನ್ನು ಆವರಿಸಿತ್ತು. ಇದರಿಂದ ಕ್ರೀಡಾಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News