×
Ad

ದಿಲ್ಲಿಯಲ್ಲಿ ವಾಯಮಾಲಿನ್ಯ ನಿಯಂತ್ರಿಸಲು ʼತಂದೂರ್‌ʼಗಳ ನಿಷೇಧ!

Update: 2025-12-16 14:06 IST

ಸಾಂದರ್ಭಿಕ ಚಿತ್ರ (Image by KamranAydinov on Freepik)

ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳದ ಹಿನ್ನೆಲೆ ರೊಟ್ಟಿ ಮತ್ತು ಹುರಿದ ತಿಂಡಿಗಳನ್ನು ತಯಾರಿಸಲು ಬಳಸುತ್ತಿದ್ದ ʼತಂದೂರ್ʼ ನಿಷೇಧಿಸುವಂತೆ ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ನಗರದ ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಿಗೆ ನಿರ್ದೇಶಿಸಿದೆ.

ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ದಿಲ್ಲಿಯ ಆನಂದ್ ವಿಹಾರ್ ಮತ್ತು ದಿಲ್ಲಿಯ ಐಟಿಒದಲ್ಲಿ ಸುಮಾರು 400 ರಷ್ಟು ದಾಖಲಾಗಿದೆ. ಡಿಸೆಂಬರ್ 9ರಂದು1981ರ ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆಯ ಸೆಕ್ಷನ್ 31 (ಎ) ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.

ಎಲ್ಲಾ ರೆಸ್ಟೋರೆಂಟ್‌ಗಳು ವಿದ್ಯುತ್, ಅನಿಲ ಆಧಾರಿತ ಅಥವಾ ಇತರ ಶುದ್ಧ ಇಂಧನ ಉಪಕರಣಗಳ ಮೂಲಕ ಆಹಾರವನ್ನು ತಯಾರಿಸಬೇಕು. ವಾಯು ಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ ಕಲ್ಲಿದ್ದಲು ಬಳಸದಂತೆ ನಿರ್ದೇಶನಗಳನ್ನು ಹೊರಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News