×
Ad

2025 ಅಕ್ಟೋಬರ್ ನಿಂದ ಲಾರಿಗಳ ಕ್ಯಾಬಿನ್ ಗಳಲ್ಲಿ ಎಸಿ ಕಡ್ಡಾಯ

Update: 2023-12-10 21:22 IST

Photo: PTI 

ಹೊಸದಿಲ್ಲಿ: ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಅಕ್ಟೋಬರ್ 2025ರ ಬಳಿಕ ತಯಾರಾಗುವ ಲಾರಿಗಳಲ್ಲಿ ಚಾಲಕರಿಗಾಗಿ ಎಸಿ ಕ್ಯಾಬಿನ್‌ ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಶುಕ್ರವಾರ ಸಂಜೆ ಹೊರಡಿಸಲಾಗಿರುವ ಗಝೆಟ್ ಅಧಿಸೂಚನೆಯು ಎನ್2 ಮತ್ತು ಎನ್3 ವರ್ಗಗಳ ಲಾರಿಗಳಿಗೆ ಅನ್ವಯಿಸಲಿದೆ.

ಎನ್2 ವರ್ಗವು ಸರಕುಗಳ ಸಾಗಾಣಿಕೆಗೆ ಬಳಸಲಾಗುವ,ಒಟ್ಟು 3.5ರಿಂದ 12 ಟನ್ ವರೆಗೆ ಒಟ್ಟು ತೂಕವನ್ನು ಹೊಂದಿರುವ ಲಾರಿಗಳನ್ನು ಮತ್ತು ಎನ್3 ವರ್ಗವು 12 ಟನ್ ಗಳಿಗಿಂತ ಹೆಚ್ಚಿನ ತೂಕವನ್ನು ಹೊಂದಿರುವ ಲಾರಿಗಳನ್ನು ಒಳಗೊಂಡಿರುತ್ತವೆ.

ಈ ವರ್ಷದ ಪೂರ್ವಾರ್ಧದಲ್ಲಿ ರಸ್ತೆ ಸಾರಿಗೆ ಸಚಿವಾಲಯವು ಹೊರಡಿಸಿದ್ದ ಅಧಿಸೂಚನೆಯು 2025,ಜ.1ರಿಂದ ಎನ್2 ಮತ್ತು ಎನ್3 ವರ್ಗಗಳ ಲಾರಿಗಳಲ್ಲಿ ಎಸಿ ಕ್ಯಾಬಿನ್ ಅಳವಡಿಕೆಯನ್ನು ಕಡ್ಡಾಯಗೊಳಿಸಿತ್ತು.

ಈ ಹಿಂದೆ,ದೇಶದ ಸಾರಿಗೆ ಕ್ಷೇತ್ರದಲ್ಲಿ ಲಾರಿ ಚಾಲಕರು ನಿರ್ವಹಿಸುತ್ತಿರುವ ಮಹತ್ವದ ಪಾತ್ರವನ್ನು ಎತ್ತಿ ತೋರಿಸಿದ್ದ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು, ಅವರ ಕೆಲಸದ ಸ್ಥಿತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವಿದೆ ಎಂದು ಹೇಳಿದ್ದರು.

ಲಾರಿ ಚಾಲಕರು ಹೆಚ್ಚಿನ ತಾಪಮಾನದ ಸ್ಥಿತಿಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ವಿಷಾದವನ್ನು ವ್ಯಕ್ತಪಡಿಸಿದ್ದ ಗಡ್ಕರಿ, ವೆಚ್ಚ ಹೆಚ್ಚಾಗಲಿದೆ ಎಂದು ಕೆಲವರು ಆಕ್ಷೇಪಿಸಿದ್ದರೂ ಲಾರಿ ಚಾಲಕರಿಗಾಗಿ ಎಸಿ ಕ್ಯಾಬಿನ್‌ ಗಳ ಅಳವಡಿಕೆ ಪ್ರಸ್ತಾವಕ್ಕೆ ತಾನು ಒತ್ತು ನೀಡುತ್ತಿರುವುದಾಗಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News