×
Ad

ಗಿಗ್ ಕಾರ್ಮಿಕರಿಂದ ರಾಷ್ಟ್ರವ್ಯಾಪಿ ಮುಷ್ಕರ; ಕಾರ್ಮಿಕರ ಹಕ್ಕೊತ್ತಾಯಗಳೇನು?

Update: 2025-12-25 16:56 IST

ಸಾಂದರ್ಭಿಕ ಚಿತ್ರ | Photo Credit : freepik.com


ಕಾರ್ಮಿಕರು ಅತಿ ಮುಖ್ಯವಾಗಿ ತಾರತಮ್ಯವಿಲ್ಲದ ವೇತನ ಪಾವತಿಯ ಒತ್ತಾಯಿಸಿದ್ದಾರೆ. ವಾಸ್ತವದ ಕಾರ್ಯಕಾರಿ ಗಂಟೆಗಳು ಮತ್ತು ವೆಚ್ಚಗಳನ್ನು ಆಧರಿಸಿದ ವೇತನ, 10 ನಿಮಿಷದಲ್ಲಿ ಡೆಲಿವರಿ ಮಾಡುವ ನಿಯಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಡಿಸೆಂಬರ್ 25 ಮತ್ತು ಡಿಸೆಂಬರ್ 31ರಂದು ಗಿಗ್ ಕಾರ್ಮಿಕರು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸ್ವಿಗಿ, ಝೊಮ್ಯಾಟೊ, ಜೆಪ್ಟೊ, ಬ್ಲಿಂಕಿಟ್, ಅಮೆಝಾನ್ ಮತ್ತು ಫ್ಲಿಪ್ಕಾರ್ಟ್ ಮೊದಲಾದ ಇ-ಕಾಮರ್ಸ್ ವೇದಿಕೆಯಡಿ ಕೆಲಸ ಮಾಡುವ ಕಾರ್ಮಿಕರು ಅನೇಕ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ತೆಲಂಗಾಣದ ಗಿಗ್ ಮತ್ತು ಪ್ಲಾಟ್ಫಾರ್ಮ್ ವರ್ಕರ್ಸ್ ಒಕ್ಕೂಟ ಮತ್ತು ಇಂಡಿಯನ್ ಫೆಡರೇಶನ್ ಆಫ್ ಆಪ್-ಬೇಸ್ಡ್ ಟ್ರಾನ್ಸ್ಪೋರ್ಟ್ ವರ್ಕರ್ಸ್ ಕರೆದಿರುವ ಮುಷ್ಕರದಲ್ಲಿ ರಾಷ್ಟ್ರಾದ್ಯಂತ ಎಲ್ಲಾ ಮೆಟ್ರೊ ಮತ್ತು ಟೈರ್-2 ನಗರಗಳಲ್ಲಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದೆ.

ಡೆಲಿವರಿ ಕಾರ್ಮಿಕರು ಏಕೆ ಪ್ರತಿಭಟಿಸುತ್ತಿದ್ದಾರೆ?

ಹಬ್ಬಗಳು ಮತ್ತು ಅತಿ ಬೇಡಿಕೆ ಅವಧಿಯಲ್ಲಿ ಕೊನೆಯ ಹಂತದ ಲಾಜಿಸ್ಟಿಕ್ಸ್ನಲ್ಲಿರುವ ಡೆಲಿವರಿ ಕಾರ್ಮಿಕರು ಬಹಳ ಅನನುಕೂಲದ ಪರಿಸರದಲ್ಲಿ ಕೆಲಸ ಮಾಡುತ್ತಾರೆ. ಅವರ ಗಳಿಕೆಗಳು ಕಡಿಮೆಯಾಗುತ್ತಿದೆ. ದೀರ್ಘವಾದ ಮತ್ತು ಅನಿಶ್ಚಿತ ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಸುರಕ್ಷಿತವಲ್ಲದ ಡೆಲಿವರಿ ಗುರಿಗಳನ್ನು ನೀಡಲಾಗಿರುತ್ತದೆ. ಆರ್ಬಿಟರಿ ಐಡಿ ಬ್ಲಾಕಿಂಗ್ ಸಮಸ್ಯೆಯನ್ನು ಎದುರಿಸುತ್ತಾರೆ. ಮೂಲ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯ ಕೊರತೆಯ ನಡುವೆ ಕೆಲಸ ಮಾಡಬೇಕಾಗುತ್ತದೆ.

ಕಾರ್ಮಿಕರು ಅತಿ ಮುಖ್ಯವಾಗಿ ತಾರತಮ್ಯವಿಲ್ಲದ ವೇತನ ಪಾವತಿಯ ಒತ್ತಾಯಿಸಿದ್ದಾರೆ. ವಾಸ್ತವದ ಕಾರ್ಯಕಾರಿ ಗಂಟೆಗಳು ಮತ್ತು ವೆಚ್ಚಗಳನ್ನು ಆಧರಿಸಿದ ವೇತನ, 10 ನಿಮಿಷದಲ್ಲಿ ಡೆಲಿವರಿ ಮಾಡುವ ನಿಯಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಸೂಕ್ತ ನಿಯಮಗಳಿಲ್ಲದೆ ಖಾತೆ ರದ್ದು ಮಾಡುವುದನ್ನು ನಿಲ್ಲಿಸಬೇಕು, ಅಪಘಾತ ವಿಮೆ ಮತ್ತು ಸುಧಾರಿತ ರಕ್ಷಣೆ, ಭರವಸೆ ನೀಡಿದ ಕೆಲಸದ ಹಂಚಿಕೆ ಮತ್ತು ಕಡ್ಡಾಯವಾದ ವಿರಾಮ ಅವಧಿ ಮೊದಲಾದ ಬೇಡಿಕೆ ಇಡಲಾಗಿದೆ.

ಮಾತ್ರವಲ್ಲದೆ, ರೌಟಿಂಗ್ ಮತ್ತು ಪಾವತಿ ವೈಫಲ್ಯ ಸರಿಪಡಿಸಲು ಆಪ್ ಆಧರಿತ ಕುಂದುಕೊರತೆ ಕಾರ್ಯಾಚರಣೆ, ಆರೋಗ್ಯ ವಿಮೆ, ಅಪಘಾತಗಳಿಂದ ರಕ್ಷಣೆ, ಪಿಂಚಣಿ ಲಾಭದಂತಹ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಲಾಗಿದೆ. ವೇದಿಕೆಗಳಲ್ಲಿರುವ ಅನೈತಿಕ ಆಲ್ಗಾರಿದಂ ನಿಯಂತ್ರಣದ ವಿರುದ್ಧ ಪ್ರಬಲ ವಿರೋಧ ವ್ಯಕ್ತಪಡಿಸಲಾಗಿದೆ.

ಸರ್ಕಾರದಿಂದ ವಿನಂತಿಸಿದ ಬೇಡಿಕೆಗಳೇನು?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ತಕ್ಷಣವೇ ಕುಂದುಕೊರತೆ ಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ. ಪ್ಲಾಟ್ಫಾರ್ಮ್ ನಡೆಸುವ ಕಂಪನಿಗಳನ್ನು ನಿಯಂತ್ರಿಸುವುದುಮ ಕಾರ್ಮಿಕ ರಕ್ಷಣೆಗಳನ್ನು ಅಳವಡಿಸುವುದು, ಸಾಮಾಜಿಕ ಭದ್ರತಾ ಚೌಕಟ್ಟನ್ನು ಗಿಗ್ ಕಾರ್ಮಿಕರಿಗಾಗಿ ರೂಪಿಸಬೇಕು ಎಂದು ಒತ್ತಾಯಿಸಲಾಗಿದೆ. ಅಲ್ಲದೆ ಗಿಗ್ ಕಾರ್ಮಿಕರನ್ನು ಸಂಘಟಿತ ಕಾರ್ಮಿಕರಾಗಿ ನೋಡಬೇಕು ಎಂದು ಒತ್ತಾಯಿಸಲಾಗಿದೆ.

ಇತ್ತೀಚೆಗೆ ಗಿಗ್ ಕಾರ್ಮಿಕರಿಗೆ ಸರ್ಕಾರ ಏನು ಮಾಡಿದೆ?

ಮೊತ್ತಮೊದಲ ಬಾರಿಗೆ ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರನ್ನು ಕಾರ್ಮಿಕ ನಿಯಮದಡಿ ತರಲಾಗಿದೆ. 2025 ನವೆಂಬರ್ 21ರಂದು ಕಾರ್ಯರೂಪಕ್ಕೆ ಬರುವಂತೆ ಸಾಮಾಜಿಕ ಭದ್ರತೆ ಸಂಹಿತೆಯನ್ನು ನವೀಕರಿಸಲಾಗಿದೆ. ಡಿಜಿಟಲ್ ವೇದಿಕೆಗಳು ಇದೀಗ ತಮ್ಮ ವಾರ್ಷಿಕ ಲಾಭದಿಂದ ಶೇ 1-2ರಷ್ಟನ್ನು ಸಾಮಾಜಿಕ ಭದ್ರತಾ ನಿಧಿಗೆ ಕೊಡುಗೆ ನೀಡಬೇಕಿದೆ. ಶೇ 5ರಷ್ಟು ಪಾವತಿಯನ್ನು (ಕ್ಯಾಪ್) ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರಿಗೆ ನೀಡಬೇಕಿದೆ.

ಈ ನಿಧಿಯಲ್ಲಿ ಆರೋಗ್ಯ ರಕ್ಷಣೆ, ಅಪಘಾತ ವಿಮೆ ಮತ್ತು ಮಾತೃತ್ವ ಸೌಲಭ್ಯಗಳು ಮೊದಲಾದ ಕಲ್ಯಾಣ ಯೋಜನೆಗಳಿಗೆ ಉದ್ದೇಶಿಸಲಾಗಿದೆ. ಹೊಸ ಕಾನೂನಿನಡಿ ಆಧಾರ್-ಲಿಂಕ್ ಮಾಡಿರುವ ಸಾರ್ವತ್ರಿಕ ಖಾತೆ ಸಂಖ್ಯೆ ಒದಗಿಸುವ ನೀತಿಯನ್ನೂ ತರಲಾಗಿದೆ.

ವೇದಿಕೆಗಳು ಸ್ಪಷ್ಟವಾದ ನಿಯಂತ್ರಣದ ಹಾದಿಗಳು ಮತ್ತು ಬಲವಾದ ಸಾಮಾಜಿಕ ಭದ್ರತಾ ರಕ್ಷಣೆ ಎಂದು ಈ ಕಾನೂನುಗಳನ್ನು ಸ್ವಾಗತಿಸಿವೆ. ಆದರೆ ಇದು ಮೊದಲ ಹೆಜ್ಜೆ ಮಾತ್ರ, ಕನಿಷ್ಠ ಗಳಿಕೆ, ಕಾರ್ಯಸ್ಥಳದ ಸುರಕ್ಷೆ ಮತ್ತು ಆಲ್ಗಾರಿದಂ ನಿರ್ವಹಣೆಯಂತಹ ರಚನಾತ್ಮಕವಾಗಿ ಅವುಗಳನ್ನು ಅಳವಡಿಸುವ ಕೆಲಸವಾಗಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News